ದೇಶ

ಉತ್ತರ ಪ್ರದೇಶ: ಖಾಯಿಲೆಯಿಂದ ಬಳಲುತ್ತಿರುವ ತಾಯಿ-ಮಗಳು, ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

Raghavendra Adiga
ಕಾನ್ಪುರ(ಉತ್ತರ ಪ್ರದೇಶ): ಸ್ನಾಯು ಕ್ಷಯ,  ಅಸ್ಥಿ ಮಜ್ಜೆ ದುರ್ಬತೆಯಿಂದಾಗಿ  ನಿಶ್ಚೇಷ್ಟಿತವಾಗಿರುವ ಉತ್ತರ ಪ್ರದೇಶದ ಮಹಿಳೆ ಹಾಗೂ ಆಕೆಯ ಪುತ್ರಿಯು ತಮಗೆ  ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದ ಮೂಲದ ಪ್ರಾಯದ ಶಶಿ ಮಿಶ್ರಾ (59) ಆಕೆಯ ಮಗಳೂ ಅನಾಮಿಕಾ ಮಿಶ್ರಾ (33) ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.  ತಮಗೆ ಪರೋಕ್ಷ ದಯಾ ಮರಣವನ್ನು ಹೊಂದಲು ಅನುಮತಿಸಬೇಕೆಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಿಟಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ರಾಜ ನಾರಾಯಣ ಪಾಂಡೆ ಎನ್ನುವವರು ಮಹಿಳೆ ಹಾಗೂ ಆಕೆಯ ಮಗಳ ಈ ಪತ್ರವನ್ನು ರಾಷ್ಟ್ರಪತಿಗಳಿಗೆ ರವಾನಿಸಿದ್ದಾರೆ.
ನಾನು ಹಾಗೂ ನನ್ನ ತಾಯಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸುಪ್ರೀಂ ಕೋರ್ಟ್‌ ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರುಗಳಿಗೆ ಈ ಹಿಂದೆಯೇ ದಯಾಮರಣ ಕೋರಿ ಪತ್ರ ಬರೆದಿದ್ದೆವು. ಎಂದು ಅನಾಮಿಕಾ ಮಿಶ್ರಾ ಹೇಳಿದ್ದಾರೆ.
ಈ ಮಹಿಳೆ ಹಾಗೂ ಆಕೆಯ ಪುತ್ರಿಗೆ ಮಸ್‌ಕ್ಯುಲರ್‌ ಡಿಸ್‌ಟ್ರೋಫಿ ಎನ್ನುವ ಅಸ್ಥಿಮಜ್ಜೆ ಖಾಯಿಲೆ ಇದೆ. ಇದರಿಂದಾಗಿ ಅವರು ಮಲಗಿದಲ್ಲಿಯೇ ಇರಬೇಕಾಗುವುದು. ಎದ್ದು ನಡೆದಾಡಲೂ ಆಗುವುದಿಲ್ಲ. ಇದೊಂದು ಅನುವಂಶಿಕ ಕಾಯಿಲೆಯಾಗಿದೆ ಎಂದು ಹೇಳುವ ಅನಾಮಿಕಾ ಮಿಶ್ರ ಅವರ ತಂದೆ ಸಹ ಇದೇ ರೋಗದಿಂದ ಬಳಲುತ್ತಿದ್ದು ಹದಿನೈದು ವರ್ಷದ ಹಿಂದೆ ಮೃತಪಟ್ಟಿದ್ದರು ಎಂದು ಹೇಳುತ್ತಾರೆ.
SCROLL FOR NEXT