ನವದೆಹಲಿ: ತ್ರಿಪುರಾದಲ್ಲಿ ಗೋಮಾಂಸ ನಿಷೇಧ ಮಾಡುವ ಪ್ರಸ್ತಾಪವಿಲ್ಲ ಎಂದು ಹಿರಿಯ ಬಿಜೆಪಿ ಮುಖಂಡ ಸುನಿಲ್ ದೇವ್‌ಧರ್ ಹೇಳಿದ್ದಾರೆ.
ರಾಜ್ಯದ ಬಹುಸಂಖ್ಯಾತರ ಆಹಾರ ಪದ್ದತಿಯಲ್ಲಿ ಗೋಮಾಂಸವೂ ಸೇರಿರುವ ಕಾರಣ ತ್ರಿಪುರಾದಲ್ಲಿ ಗೋಮಾಂಶ ನಿಷೇಧ ಅಸಾಧ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಗೋಮಾಂಸ ಸೇವನೆಗೆವಿರೋಧವಾಗಿದ್ದಲ್ಲಿ ಅದನ್ನು ನಿಷೇಧಿಸಲು ಸಾಧ್ಯವಿದೆ. ಆದರೆ ನಮ್ಮ ರಾಜ್ಯದಲ್ಲಿ ಹೆಚ್ಚಿನವರು ಗೋಮಾಂಸ ಸೇವನೆ ಮಾಡುವುದರಿಂದ ಸರ್ಕಾರ ಗೋಮಾಂಸ ನಿಷೇಧಿಸದು’ ಸುನಿಲ್ ಹೇಳಿದ್ದಾರೆ.
’ಬಹುಮಂದಿ ಕ್ರೈಸ್ತರು ಮತ್ತು ಮುಸ್ಲಿಮರು, ಅಲ್ಲದೆ ಕೆಲವು ಹಿಂದೂಗಳೂ ಸಹ ಗೋಮಾಂಸವನ್ನು ಸೇವಿಸುತ್ತಾರೆ. ಹೀಗಾಗಿ ಇಲ್ಲಿ ಗೋಮಾಂಸ ನಿಷೇಧ ಮಾಡಬಾರದು’ ಅವರು ಹೇಳಿದ್ದಾರೆ.
ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿತ್ತು. ಸುನಿಲ್ ದೇವ್‌ಧರ್ ಚುನಾವಣೆಯ ವೇಳೆ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡಿದ್ದರು.