ಬಿಹಾರ : ಬಿಹಾರದಲ್ಲಿನ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಯಲ್ಲಿ ಆರ್ ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರ ತತ್ವ ಸಿದ್ಧಾಂತದಿಂದ ಗೆಲುವು ಸಾಧಿಸಲಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ತಿಳಿಸಿದ್ದಾರೆ.
ಈ ಗೆಲುವಿಗೆ ಸಹಕರಿಸಿದ ಜನತೆಗೆ ತೇಜಸ್ವಿ ಯಾದವ್ ಕೃತಜ್ಞತೆ ಸಲ್ಲಿಸಿದ್ದು, ಲಾಲೂ ಪ್ರಸಾದ್ ಯಾದವ್ ತೆಗಳುವವರಿಗೆ ಲಾಲೂ ಒಬ್ಬರು ಆದರ್ಶಕರು ಎಂದು ಹೇಳುವುದಾಗಿ ತಿಳಿಸಿದ್ದು, ಮಾಜಿ ಮುಖ್ಯಮಂತ್ರಿ ಮಾಂಝಿ ಅವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಈ ಮಧ್ಯೆ ರಾಷ್ಟ್ರೀಯ ಜನತಾ ದಳದ ಬಗ್ಗೆ ನಂಬಿಕೆ ಕಳೆದುಕೊಳ್ಳದೆ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದು, ಈ ಗೆಲುವನ್ನು ಬಿಹಾರದ ಜನರಿಗಾಗಿ ಆರ್ಪಿಸುವುದಾಗಿ ಹೇಳಿದ್ದಾರೆ.