ದೇಶ

ಕಳೆದ ವರ್ಷ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಕೋಮುಗಲಭೆ

Lingaraj Badiger
ನವದೆಹಲಿ: ಉತ್ತರ ಪ್ರದೇಶದ ಎರಡು ಲೋಕಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಆಡಳಿತರೂಢ ಬಿಜೆಪಿ ಹೀನಾಯ ಸೋಲು ಅನುಭವಿಸಲು ಕೋಮುಗಲಭೆ ಪ್ರಮುಖ ಕಾರಣವಾಗಿರಬಹುದು.
ಕಳೆದ ವರ್ಷ ಅತಿ ಹೆಚ್ಚು ಕೋಮುಗಲಭೆ ನಡೆದ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನ ಪಡೆದಿದೆ ಎಂದು ಬುಧವಾರ ಲೋಕಸಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
2017ರಲ್ಲಿ ದೇಶದಲ್ಲಿ ಒಟ್ಟು 822 ಕೋಮುಗಲಭೆಗಳು ನಡೆದಿದ್ದು, 2016ರಲ್ಲಿ 703 ಹಾಗೂ 2015ರಲ್ಲಿ 751 ಕೋಮು ಗಲಭೆಗಳು ನಡೆದಿವೆ.
ಅತಿ ಹೆಚ್ಚು ಕೋಮು ಗಲಭೆಗಳು ನಡೆದ ರಾಜ್ಯಗಳ ಪೈಕಿ ಉತ್ತರ ಪ್ರದೇಶ(195) ಮೊದಲ ಸ್ಥಾನ, ಕರ್ನಾಟಕ(100) ಎರಡನೇ ಸ್ಥಾನ, ರಾಜಸ್ಥಾನ(91) ಮೂರನೇ ಸ್ಥಾನ, ಬಿಹಾರ(85) ನಾಲ್ಕನೆ ಸ್ಥಾನ ಹಾಗೂ  ಮಧ್ಯಪ್ರದೇಶ(63) ಐದನೇ ಸ್ಥಾನ ಪಡೆದಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಅವರು ಇಂದು ಲೋಕಸಭೆಗೆ ತಿಳಿಸಿದ್ದಾರೆ.
2016ರಲ್ಲೂ ಉತ್ತರ ಪ್ರದೇಶದಲ್ಲೂ ಅತಿ ಹೆಚ್ಚು ಕೋಮು ಗಲಭೆಗಳು ಸಂಭವಿಸಿದ್ದು, ಕರ್ನಾಟಕ ಎರಡನೇ ಸ್ಥಾನದಲಿದೆ. ಮಹಾರಾಷ್ಟ್ರ, ಬಿಹಾರ ಮತ್ತು ರಾಜಸ್ಥಾನ ನಂತರದ ಸ್ಥಾನಗಳಲ್ಲಿದ್ದವು ಎಂದು ಅಹಿರ್ ಅವರು ಹೇಳಿದ್ದಾರೆ.
SCROLL FOR NEXT