’ದಿ ವೈರ್’ ವಿರುದ್ಧ ಜೈ ಶಾ ಮಾಮ್ನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ತಡೆ, ಏ.12ರವರೆಗೆ ವಿಚಾರಣೆ ನಡೆಸದಿರಲು ಆದೇಶ 
ದೇಶ

’ದಿ ವೈರ್’ ವಿರುದ್ಧ ಜೈ ಶಾ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

’ದಿ ವೈರ್’ ಹಾಗೂ ಅದರ ಸುದ್ದಿಗಾರರ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಪುತ್ರ ಜೈ ಶಾ ಗುಜರಾತಿನ ವಿಚಾರಣಾ ನ್ಯಾಯಾಲಯದಲ್ಲಿ ಹೂಡಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಗೆ.........

ನವದೆಹಲಿ: ’ದಿ ವೈರ್’ ಹಾಗೂ ಅದರ ಸುದ್ದಿಗಾರರ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಪುತ್ರ ಜೈ ಶಾ ಗುಜರಾತಿನ ವಿಚಾರಣಾ ನ್ಯಾಯಾಲಯದಲ್ಲಿ ಹೂಡಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ.
ಗುಜರಾತ್ ನ್ಯಾಯಾಲಯವು ಏಪ್ರಿಲ್ 12 ರವರೆಗೆ ಮೊಕದ್ದಮೆ ಸಂಬಂಧ ವಿಚಾರಣೆ ನಡೆಸಬಾರದೆಂದು ಎಂದು ನ್ಯಾಯಾಲಯ ಆದೇಶಿಸಿದೆ.
ಇದೇ ವೇಳೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಪೀಠವು ಪತ್ರಕರ್ತರ ವಿರುದ್ಧ ದೂರು ಸಲ್ಲಿಸಿದ್ದ ಜೈ ಶಾ ಹಾಗೂ ಇತರರಿಗೆ ಪತ್ರಕರ್ತರು ಸಲ್ಲಿಸಿದ್ದ ಮನವಿಗೆ ಎರಡು ವಾರದಲ್ಲಿ ಉತ್ತರಿಸುವಂತೆ ಹೇಳಿದೆ. 
ಗುಜರಾತ್ ವಿಚಾರನಾ ನ್ಯಾಯಾಲಯವು ತಾನು ಪತ್ರಕರ್ತರ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಪತ್ರಕರ್ತರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. 
ಮಾದ್ಯಮವು ಹೆಚ್ಚು ಜವಾಬ್ದಾರಿಯುತವಾಗಿರಬೇಕು. ಅದು ಯಾರ ಬಗೆಗೆ ತಾನೇನು ಕಲ್ಪಿಸಿಕೊಳ್ಳುತ್ತೇನೋ ಅದನ್ನು ಬರೆಯುವಂತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ತಾವು ಈ ಹಿಂದೆ ನಡೆದ ಘಟನೆಗಳ ಬಗೆಗೆ ಹೇಳುತ್ತಿಲ್ಲ ಎಂದು ಒತ್ತಿ ಹೇಳಿದ ಮುಖ್ಯ ನ್ಯಾಯಮೂರ್ತಿ ಮಿಶ್ರಾ ಕೆಲವೊಮ್ಮೆ ಪತ್ರಿಕೆಗಳು ’ನ್ಯಾಯಾಲಯದ ತಿರಸ್ಕಾರಕ್ಕೆ ಪಾತ್ರವಾಗುವಂತೆ’ ಬರೆಯುತ್ತಾರೆ ಎಂದು ಹೇಳಿದರು.
"ಮಾದ್ಯಮ, ಅಭಿವ್ಯಕ್ತಿ ಸ್ವಾತಂತ್ರದ ಕುರಿತಂತೆ ನಾನು ಈ ಹಿಂದೆ ಸಾಕಷ್ಟು ಸಲ ಹೇಳಿದ್ದೇನೆ. ನಾವು ಮಾದ್ಯಮವನ್ನು ಹತ್ತಿಕ್ಕಲು ಬಯಸುವುದಿಲ್ಲ. ಆದರೆ ಎಲ್ಲವಕ್ಕೂ ಕೆಲ ಮಿತಿಗಳಿವೆ. ಯಾರೊಬ್ಬರ ಬಗೆಗೆ ನಾವೇನು ಯೋಚಿಸುತ್ತೇವೆಯೋ ಅದನ್ನೇ ಬರೆಯುವುದಲ್ಲ. ಇಲ್ಲಿ ಕೆಲ ಪರಿಮಿತಿಗಳಿಗೆ ಒಳಪಟ್ಟು ಬರೆಯಬೇಕು." ಅವರು ಹೇಳಿದ್ದಾರೆ.
ಜೈ ಶಾ ಅವರ ಸಂಸ್ಥೆಯೊಂದರ ಬಗೆಗೆ ’ದಿ ವೈರ್’ ಪ್ರಕಟಿಸಿದ್ದ ಲೇಖನವೊಂದರ ವಿರುದ್ಧ ಶಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯನ್ನು ವಜಾಗೊಳಿಸುವಂತೆ ಕೋರಿ ವೈರ್ ನ ಪತ್ರಕರ್ತರು ಗುಜರಾತ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಜ.8ರಂದು ನ್ಯಾಯಾಲಯವು ಪತ್ರಕರ್ತರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT