ದೇಶ

ಬಿಹಾರ: ಎಲೆವೇಟೆಡ್ ಹೆದ್ದಾರಿಯಿಂದ ಕೆಳಗೆ ಬಿದ್ದ ಬಸ್, 10 ಮಂದಿ ಸಾವು

Lingaraj Badiger
ಸೀತಾಮರ್ಹಿ: ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಎಲೆವೇಟೆಡ್ ಹೆದ್ದಾರಿಯಿಂದ ಕೆಳಗೆ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಹಲವು ಮಕ್ಕಳು ಸೇರಿದಂತೆ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೀತಾಮರ್ಹಿ ಜಿಲ್ಲೆಯ ಭನಸ್ಪತಿ ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ 77ರಲ್ಲಿ ಮುಜಾಫರ್ ಪುರಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ ಎಂದು ಠಾಣಾ ಅಧಿಕಾರಿ ಶಿವನಾರಾಯಣ್ ರಾಮ್ ಅವರು ಹೇಳಿದ್ದಾರೆ.
ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅಪಘಾತಕ್ಕಿಡಾದ ಬಸ್ ಅನ್ನು ಹೊರ ತೆಗೆಯುವ ಕಾರ್ಯ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
SCROLL FOR NEXT