ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳುವ ಮುನ್ನ ಮುನ್ನೆಚ್ಚರಿಕೆವಹಿಸಿ: ಯುಐಡಿಎಐ 
ದೇಶ

ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ: ಯುಐಡಿಎಐ

ಯಾವುದೇ ಸೇವೆಯನ್ನು ಪಡೆದುಕೊಳ್ಳೌ ಆಧಾರ್ ಸಂಖ್ಯೆಯನ್ನು ಸೇರಿ ತಮ್ಮ ವೈಯುಕ್ತಿಕ ಮಾಹಿತಿಯನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುವುದಕ್ಕೆ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು............

ನವದೆಹಲಿ: ಯಾವುದೇ ಸೇವೆಯನ್ನು ಪಡೆದುಕೊಳ್ಳೌ ಆಧಾರ್ ಸಂಖ್ಯೆಯನ್ನು ಸೇರಿ ತಮ್ಮ ವೈಯುಕ್ತಿಕ ಮಾಹಿತಿಯನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುವುದಕ್ಕೆ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಯುಐಡಿಎಐ ಸಾರ್ವಜನಿಕರಿಗೆ ಮನವಿ ಮಾಡಿದೆ
ಇತ್ತೀಚೆಗೆ ಗೂಗಲ್ ಸರ್ಚ್ ಮಾಡುವ ಮೂಲಕ ಆಧಾರ್ ಪಿಡಿಎಫ್ ಗಳನ್ನು ಪಡೆದುಕೊಳ್ಳುವ ಸಾಧ್ಯತೆಯ ಬಗೆಗೆ ಮಾದ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಗಳ ಹಿನ್ನೆಲೆಯಲ್ಲಿ ಯುಐಡಿಎಐ ಈ ಸ್ಪಷ್ಟನೆ ನಿಡಿದೆ. ಮೇರಾ ಆಧಾರ್, ಮೇರಿ ಪೆಹಚಾನ್ ಅಡಿಯಲ್ಲಿ ಆಧಾರ್ ಮತ್ತು ಅದರ ದತ್ತಾಂಶಗಳ ಭದ್ರತೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಯುಐಡಿಎಐ ಹೇಳಿದೆ.
ಜನರು ಯಾವುದೇ ಸೇವೆಗಳನ್ನು ಪಡೆಯುವ ಸಲುವಾಗಿ ಅಂತರ್ಜಾಲದಲ್ಲಿ ಆಧಾರ್ ಸೇರಿದಂತೆ ತಮ್ಮ ವೈಯುಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಸೇವಾ ಪೂರೈಕೆದಾರರಿಗೆ ಅಥವಾ ಮಾರಾಟಗಾರರಿ ತಮ್ಮ ವಿವರಗಳನ್ನು ನೀಡುವ ಮುನ್ನ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಹೇಳಿಕೆಯಲ್ಲಿ ತಿಳಿಸಿದೆ.
ಆಧಾರ್ ಗುರುತಿನ ವ್ಯವಸ್ಥೆಯ ದೃಢತೆಗೆ ಅನುಗುಣವಾಗಿ,12 ಅಂಕಿಯ ಬಯೋಮೆಟ್ರಿಕ್ ಐಡೆಂಟಿಫೈಯರ್ ಅನ್ನು ಪ್ರಕಟಿಸುವ ಯುಐಡಿಎಐ ಕೆಲ ದುಷ್ಕರ್ಮಿಗಳು ಆಧಾರ್ ಕಾರ್ಡ್ ಗಳನ್ನು ನಕಲು ಮಾಡುತ್ತಿದ್ದಾರೆ ಯುಐಡಿಎಐಗೆ ಇಂತಹಾ ಕಾರ್ಡ್ ಗಳ ಸಂಪೂರ್ಣ ಮಾಹಿತಿ ಸಿಗುವುದಿಲ್ಲ. ಇದರಿಂಡ ಆಧಾರ್ ಭದ್ರತೆಗೆ ಧಕ್ಕೆಯಿಲ್ಲ. ಈ ವರದಿಗಳು ಸತ್ಯಕ್ಕೆ ದೂರವಾಗಿದ್ದು ಆಧಾರ್ ಹಾಗೂ ಅದರ ದತ್ತಾಂಶದ ಭದ್ರತೆಗೆ ಯಾವ ಹಾನಿಯೂ ಆಗಿಲ್ಲ. ಯುಐಡಿಎಐ ಡೇಟಾಬೇಸ್ ನಿಂದ ಯಾವ ಆಧಾರ್ ಕಾರ್ಡ್ ಪಿಡಿಎಫ್ ಗಳನ್ನು ಪಡೆಯುವುದು ಸಾಧ್ಯವಿಲ್ಲ.  ಆಧಾರ್ ಕಾರ್ಡ್ ಗಳನ್ನು ಪಡೆಯಲು ಯಾರೊಬ್ಬರ ಬಯೋಮೆಟ್ರಿಕ್ ಪ್ರಮಾಣ ಅಗತ್ಯವಿದ್ದು ಬೇರೆ ಗುರುತು ಚೀಟಿಗಳಂತೆ ಅದನ್ನು ನಕಲು ಮಾಡುವುದು ಸುಲಭವಲ್ಲ ಎಂದು ಯುಐಡಿಎಐ ವಾದಿಸಿದೆ.
ಬೇರೆಲ್ಲಾ ದಾಖಲಾತಿಗಳ್ಂತೆಯೇ ಯಾರೊಬ್ಬರೂ ಅಪರಿಚಿತರಿಗೆ ತಮ್ಮ ಆಧಾರ್ ಸಂಖ್ಯೆ ಮಾಹಿತಿ ನೀಡುವ ಮುನ್ನ ಎಚ್ಚರ ವಹಿಸಲು ಬೇಕು. ಯಾರಾದರೂ ಆಧಾರ್ ಮಾಹಿತಿಯನ್ನು  ಅನಧಿಕೃತವಾಗಿ ಪ್ರಕಟಿಸಿದರೆ, ಗೌಪ್ಯತೆ ಉಲ್ಲಂಘನೆ ಮಾಡಿದ್ದರೆ ಅಂತಹಾ ವ್ಯಕ್ತಿಗಳ ಮೇಲೆ ಕಾನೂನು ರೀತಿಯ ಮೊಕದ್ದಮೆ ಹೂಡಲು ಅವಕಾಶವಿದೆ.ಎಂದು ಯುಐಡಿಎಐ ಪ್ರಕಟಣೆಯಲ್ಲಿ ತಿಳಿಸಿದೆ.
ಯುಐಡಿಎಐ ಹೊರತಾಗಿ ಇತರೆ ವೆಬ್ ಸೈಟ್ ಗಳಿಂದ ಆಧಾರ್ ಬಗ್ಗೆ ಮಾಹಿತಿಪಡೆಯಲು ಸಾಧ್ಯ,  ಗೂಗಲ್ ಸರ್ಚ್ ಮೂಲಕ ಹಲವರ ಆಧಾರ್ ಮಾಹಿತಿ ತಿಳಿಯಬಹುದು ಎಂದು ಮಾದ್ಯಮಗಳಳಲ್ಲಿ ವರದಿಯಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು