ದೇಶ

ಬಿಜೆಪಿ ಸರ್ಕಾರ ಜನರನ್ನು ಬಡತನದತ್ತ ತಳ್ಳುತ್ತಿದೆ: ಪಿ.ಚಿದಂಬರಂ

Sumana Upadhyaya

ನವದೆಹಲಿ: ಕಾಂಗ್ರೆಸ್ ಸಮಗ್ರ ಅಧಿವೇಶನದ ಕೊನೆಯ ದಿನವಾದ ಇಂದು ಮಾತನಾಡಿದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಮೋದಿ ಸರ್ಕಾರ ಗಟ್ಟಿಯಾದ ಆರ್ಥಿಕತೆಯನ್ನು ಅಧಿಕಾರ ವಹಿಸಿಕೊಂಡ ದಿನಗಳಲ್ಲಿ ಪಡೆದುಕೊಂಡಿತ್ತು. ಅದು ಹಿಂದಿನ ಯುಪಿಎ ಸರ್ಕಾರದ ಕೊಡುಗೆ. ಆದರೆ ಇಂದು ಭಾರತದ ಆರ್ಥಿಕತೆ ವಿಶ್ವದ ಆರ್ಥಿಕ ಪರಿಸ್ಥಿತಿಗೆ ಹೋಲಿಸಿದರೆ ಇಳಿಮುಖವಾಗುತ್ತಿದೆ. ಇದಕ್ಕೆ ಮೋದಿ ಸರ್ಕಾರದ ಕಳಪೆ ನೀತಿಯೇ ಕಾರಣ ಎಂದು ಟೀಕಿಸಿದರು.

14 ಕೋಟಿ ಜನರನ್ನು ಬಡತನದಿಂದ ಹೊರತಂದದ್ದು ಹಿಂದಿನ ಮನಮೋಹನ್ ಸಿಂಗ್ ಸರ್ಕಾರದ ಅತಿ ದೊಡ್ಡ ಸಾಧನೆ. ಆದರೆ ಇಂದು ಬಿಜೆಪಿ ಸರ್ಕಾರ ದೇಶದ ಜನರನ್ನು ಬಡತನದತ್ತ ತಳ್ಳುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆ ಇತ್ತೀಚೆಗೆ ಅಧಿಕವಾಗುತ್ತಿದೆ ಎಂದು ಹೇಳಿದರು.

1990ರ ದಶಕದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಮುಕ್ತ ನೀತಿಗೆ ನಾಂದಿ ಹಾಡಿದ್ದರು. ಅದು ಮನಮೋಹನ್ ಸಿಂಗ್ ಸರ್ಕಾರದಲ್ಲಿ ಉಚ್ಱಾಯ ಸ್ಥಿತಿಗೆ ತಲುಪಿತ್ತು. ಇಂದು ಅಧೋಗತಿಗೆ ಇಳಿಯುತ್ತಿದೆ ಎಂದು ಟೀಕಿಸಿದರು.

SCROLL FOR NEXT