ಪ್ರಕಾಶ್ ಜಾವಡೇಕರ್ 
ದೇಶ

ತಪ್ಪುದಾರಿಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆಸುತ್ತಿರುವ ರಾಹುಲ್ ಮೊದಲು ಕ್ಷಮೆ ಕೋರಲಿ- ಪ್ರಕಾಶ್ ಜಾವಡೇಕರ್ ಆಗ್ರಹ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ 84 ನೇ ಅಧಿವೇಶನದಲ್ಲಿ ಇಂದು ಮಾಡಿದ ಭಾಷಣದ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ 84 ನೇ ಅಧಿವೇಶನದಲ್ಲಿ ಇಂದು ಮಾಡಿದ ಭಾಷಣದ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ತಪ್ಪುದಾರಿಯಲ್ಲಿ ಮುನ್ನಡೆಸುತ್ತಿರುವ   ರಾಹುಲ್ ಗಾಂಧಿ ಪ್ರಧಾನಿ ನರೇಂದ್ರಮೋದಿ ವಿರುದ್ಧ ಮಾತನಾಡುವ ಬದಲು ಮೊದಲು ಅವರ ಪಕ್ಷದ ಕ್ಷಮೆ ಕೋರಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರಮೋದಿ ವಿರುದ್ಧ ಆರೋಪ ಮಾಡುವ ಬದಲು ಕಾಂಗ್ರೆಸ್ ಸಿಖ್ ಧರ್ಮವನ್ನು ಯಾವ ರೀತಿ ನಡೆಸಿಕೊಂಡಿತ್ತು. ಮಾಧ್ಯಮಗಳ ಮೇಲೆ ಹೇಗೆ ನಿಯಂತ್ರಣ ವಿಧಿಸಲಾಯಿತು, ಹೇಗೆಲ್ಲಾ ಭ್ರಷ್ಟಾಚಾರ, ಹಗರಣ ನಡೆಸಲಾಯಿತು ಎಂಬ ಬಗ್ಗೆ ಮರೆತು ಹೋಗಿತ್ತೆ ಎಂದು ಪ್ರಶ್ನಿಸಿದ ಅವರು, ಈ ಎಲ್ಲಾ ಕಾರಣಗಳಿಂದ ರಾಹುಲ್ ಗಾಂಧಿ ಮೊದಲು ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದಾರೆ.  

ರಾಹುಲ್ ಗಾಂಧಿ ತನ್ನ ಭಾಷಣದಲ್ಲಿ ಹಿಂದೂ ಧರ್ಮ ಹಾಗೂ ಜನರ ನಂಬಿಕೆಯನ್ನು  ಅಪಮಾನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಅವರನ್ನು ಟೀಕಿಸಿರುವುದಲ್ಲದೇ, ನ್ಯಾಯ ವ್ಯವಸ್ಥೆಯ ಮೇಲೂ ದಾಳಿ ನಡೆಸಿದ್ದಾರೆ. ನರೇಂದ್ರಮೋದಿಯನ್ನು ವೈಯಕ್ತಿಕವಾಗಿ ಯಾರೂ ದಾಳಿ ಮಾಡಿರಲಿಲ್ಲ. ಆದರೆ, ರಾಹುಲ್ ಗಾಂಧಿ ಅಂತಹ ದಾಳಿ ಮಾಡಿದ್ದಾರೆ  ಎಂದು  ಹರಿಹಾಯ್ದರು.

ಮಾತಾಡಿ ಓಡುವುದೇ ಅವರ ಸಿದ್ಧಾಂತವಾಗಿದ್ದು, ತಪ್ಪು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಆದರೆ , ಅದನ್ನೇ ಜೋರಾಗಿ ಮಾತನಾಡಿದ್ದಾರೆ ಎಂದು ಪ್ರಕಾಶ್ ಜಾವಡೇಕರ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

SCROLL FOR NEXT