ಮೇಲೆ ಪುಣೆ ನ್ಯಾಯಾಲಯದ ಆವರಣದಲ್ಲಿ ಮಿಲಿಂದ್ ಎಕ್ ಬೊಟೆ ಸುತ್ತುವರೆದ ವಿವಿಧ ದಲಿತಪರ ಸಂಘಟನೆಗಳು ದಾಳಿ 
ದೇಶ

ಭೀಮಾ ಕೋರೆಗಾಂವ್ ಕೇಸ್ :ನ್ಯಾಯಾಲಯ ಆವರಣದಲ್ಲಿ ಸಮಸ್ತ ಹಿಂದಿ ಅಘಾಡಿ ಕಾರ್ಯಕಾರಿ ಅಧ್ಯಕ್ಷ ಮಿಲಿಂದ್ ಎಕ್ ಬೊಟೆ ಮೇಲೆ ದಾಳಿ

ಭೀಮಾ ಕೋರೆಗಾಂವ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬಂಧಿಸಲಾಗಿರುವ ಸಮಸ್ತ ಹಿಂದಿ ಅಘಾಡಿ ಕಾರ್ಯಕಾರಿ ಅಧ್ಯಕ್ಷ ಮಿಲಿಂದ್ ಎಕ್ ಬೊಟೆ ಮೇಲೆ ಇಂದು ಪುಣೆ ನ್ಯಾಯಾಲಯದ ಆವರಣದಲ್ಲಿ ವಿವಿಧ ದಲಿತಪರ ಸಂಘಟನೆಗಳು ದಾಳಿ ನಡೆಸಿವೆ.

ಮುಂಬೈ : ಭೀಮಾ ಕೋರೆಗಾಂವ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬಂಧಿಸಲಾಗಿರುವ ಸಮಸ್ತ ಹಿಂದಿ ಅಘಾಡಿ ಕಾರ್ಯಕಾರಿ ಅಧ್ಯಕ್ಷ ಮಿಲಿಂದ್ ಎಕ್ ಬೊಟೆ ಮೇಲೆ ಇಂದು ಪುಣೆ ನ್ಯಾಯಾಲಯದ ಆವರಣದಲ್ಲಿ ವಿವಿಧ ದಲಿತಪರ ಸಂಘಟನೆಗಳು ದಾಳಿ ನಡೆಸಿವೆ.

ಮಿಲಿಂದ್ ಎಕ್ ಬೊಟೆ ಮುಖಕ್ಕೆ ಕಪ್ಪುಮಸಿ ಬಳಿಯಲು ಯತ್ನಿಸಲಾಯಿತು. ಆದರೆ, ಆತನನ್ನು ಸುರಕ್ಷಿತವಾಗಿ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಭೀಮಾ ಕೋರೆಂಗಾವ್ ಗಲಭೆಗೆ ಸಂಬಂಧಿಸಿದಂತೆ ಮಿಲಿಂದ್ ಎಕ್ ಬೊಟೆಯನ್ನು ಕಳೆದ ಬುಧವಾರ ಬಂಧಿಸಿದ್ದು, ಮಾರ್ಚ್ 21ರವರೆಗೂ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣ ಸಂಬಂಧ ವಿಚಾರಣೆಗಾಗಿ ಇಂದು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ತಿಳಿಸಿರುವ ಪೊಲೀಸರು, ಪೊಲೀಸ್ ಕಸ್ಟಡಿಯನ್ನು ಎರಡು ದಿನ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.

 ಈ ಮಧ್ಯೆ  ಸಾಂಗ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮತ್ತೋರ್ವ ಆರೋಪಿ, ಸಾಂಬಾಜಿ ಭಿಡೆ, ಭೀಮಾ ಕೋರೆಗಾಂವ್ ಗಲಭೆಗೂ ಮುನ್ನ ಪುಣೆಯಲ್ಲಿನ  ಈಲ್ಗರ್ ಪರಿಷದ್ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.

ಜನವರಿ 1ರಂದು ಪುಣೆಯ ಭೀಮಾ ಕೋರೆಗಾಂವ್ ವಿಜಯೋತ್ಸಾವ ಆಚರಣೆ ವೇಳೆ ಕಲ್ಲುತೂರಾಟ ನಡೆದು ಉಂಟಾದ ಗಲಭೆಯಲ್ಲಿ ಒಬ್ಬರು ಸಾವಿಗೀಡಾಗಿದ್ದರು.

ಈ ಗಲಭೆಗೆ ಎಕ್ ಬೊಟೆ ಹಾಗೂ ಬಿಡೆ ಪ್ರಚೋದನೆಯೇ ಕಾರಣ ಎಂದು ಬಿಬಿಎಂಎಸ್ ನಾಯಕ ಪ್ರಕಾಶ್ ಅಂಬೇಡ್ಕರ್ ಆರೋಪಿಸಿ ಮಹಾರಾಷ್ಟ್ರದಲ್ಲಿಎಡ ಹಾಗೂ ದಲಿತ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಕೂಡಾ ಇದರಲ್ಲಿ ಪಾಲ್ಗೊಂಡಿದ್ದರು.

ಈ ಮಧ್ಯೆ ಈ ತಿಂಗಳ 26 ರೊಳಗೆ ಭಿಡೆಯನ್ನು ಬಂಧಿಸದಿದ್ದರೆ ಮಹಾರಾಷ್ಟ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಾಶ್ ಅಂಬೇಡ್ಕರ್ ಇತ್ತೀಚಿಗೆ ಎಚ್ಚರಿಕೆ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT