ಮಾಯಾಂಕ್ ಗಾಂಧಿ 
ದೇಶ

ಕೇಜ್ರಿವಾಲ್ ಅಂಜಲಿ ದಾಮಾನಿಯಾ ಕ್ಷಮೆ ಕೋರಬೇಕು: ಮಾಯಾಂಕ್ ಗಾಂಧಿ ಒತ್ತಾಯ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷದ ಮಾಜಿ ಸಂಚಾಲಕಿ ಅಂಜಲಿ ದಾಮಾನಿಯಾ ಅವರ ಕ್ಷಮೆ ಕೋರಬೇಕೆಂದು ಆಮ್ ಆದ್ಮಿ ಪಕ್ಷದ ಮಾಜಿ ಸದಸ್ಯ ಮಾಯಾಂಕ್ ಗಾಂಧಿ ಒತ್ತಾಯಿಸಿದ್ದಾರೆ.

ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕ್ಷಮೆ ಕೋರಿದ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷದ ಮಾಜಿ ಸಂಚಾಲಕಿ ಅಂಜಲಿ ದಾಮಾನಿಯಾ ಅವರ ಕ್ಷಮೆ ಕೋರಬೇಕೆಂದು ಆಮ್ ಆದ್ಮಿ ಪಕ್ಷದ ಮಾಜಿ ಸದಸ್ಯ ಮಾಯಾಂಕ್ ಗಾಂಧಿ ಒತ್ತಾಯಿಸಿದ್ದಾರೆ.

ನಿತಿನ್ ಗಡ್ಕರಿ ವಿರುದ್ಧ ಆರೋಪ ಮಾಡಲು ಅಂಜಲಿ ದಾಮಾನಿಯಾ ಅವರ ಮಾಹಿತಿ ಬಳಸಿಕೊಂಡಿದ್ದ ಅರವಿಂದ್ ಕೇಜ್ರಿವಾಲ್ ಕೂಡಲೇ ಕ್ಷಮೆ ಕೋರಬೇಕು.  ಅಂಜಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ವಿಶ್ವಾಸವಿರುವುದಾಗಿ ಮಾಯಾಂಕ್ ಗಾಂಧಿ ಹೇಳಿದ್ದಾರೆ.

ಮಾಹಿತಿ ಹಕ್ಕು ಕಾರ್ಯಕರ್ತೆಯಾಗಿದ್ದ ಅಂಜಲಿ ದಾಮಾನಿಯಾ, ನಿತಿನ್ ಗಡ್ಕರಿ ಎನ್ ಸಿಪಿಯೊಂದಿಗೆ ಮೃಧು ಧೋರಣೆ ಹೊಂದಿದ್ದಾರೆ. ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಶರದ್ ಪವರ್ ಅವರೊಂದಿಗೆ ವ್ಯವಹಾರಿಕ ಸಂಬಂಧ ಹೊಂದಿದ್ದಾರೆ  ಎಂದು ಆರೋಪಿಸಿದ್ದರು.

ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಗಡ್ಕರಿ ಅವರನ್ನು ಭೇಟಿಯಾಗಲು ದಾಮಾನಿಯಾ ಪ್ರಯತ್ನಿಸಿದ್ದರೂ ನಿತಿನ್ ಗಡ್ಕರಿ ಅವಕಾಶ ಮಾಡಿಕೊಟ್ಟಿರಲಿಲ್ಲ. ಹಗರಣ ಬಯಲಿಗೆಳೆಯದಂತೆ ಗಡ್ಕರಿ ಒತ್ತಡ ಹೇರುತ್ತಿದ್ದರು ಎಂದು ಆಕೆ ಆರೋಪಿಸಿದ್ದರು.

ದಾಮಾನಿಯಾ ಅವರನ್ನು ಭೇಟಿಯಾಗಿಲ್ಲ ಎಂದು ಗಡ್ಕರಿ ಹೇಳುತ್ತಿದ್ದರು. ಗಡ್ಕರಿ ಹಾಗೂ ಪವಾರ್ ನಡುವಿನ ಸಂಬಂಧದ ಬಗ್ಗೆಗೂ ಬಿಜೆಪಿ ತಿರಸ್ಕರಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

SCROLL FOR NEXT