ನವದೆಹಲಿ: 2ಜಿ ಹಗರನಲ್ಲಿ ಬಾಗಿಯಾಗಿ ಅಕ್ರಮ ಹಣ ವರ್ಗಾವಣೆ ಮಾಡಿದ್ದ ಪ್ರಕರಣಕ್ಕೆ ಸಂಬಂಧ ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಡಿಎಂಕೆ ಸಂಸದೆ ಕನಿಮೋಳಿ ಅವರಿಗೆ ದೆಹಲಿ ಹೈಕೋರ್ಟ್ ನೋಟೀಸ್ ಜಾರಿಗೊಳಿಸಿದೆ.
2ಜಿ ಹಗರಣದ ವೇಳೆ ಮಾಡಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರಾಜಾ, ಕನಿಮೋಳಿ ಮತ್ತು ಇತರರಿಗೆ ನೋಟೀಸ್ ನಿಡಿದೆ. ನ್ಯಾಯಾಧೀಶರಾದ ಎಸ್.ಪಿ ಗರ್ಗ್ ವಿಶೇಷ ನ್ಯಾಯಾಲಯ 2ಜಿ ಹಗರಣದಲ್ಲಿ ರಾಜಾ, ಕನಿಮೋಳಿ ಹಾಗೂ ಇತರರನ್ನು ನಿರ್ದೋಷಿಗಳೆಂದು ತೀರ್ಪು ನಿಡಿದ್ದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮನವಿಯನ್ನು ಆಲಿಸಿ ಇದಕ್ಕಾಗಿ ಪ್ರತ್ಯೇಕ ನೋಟೀಸ್ ಜಾರಿಗೊಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯ್ದೆ ಸಂಬಂಧದಲ್ಲಿ ಇಡಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದೆ, ಪ್ರಕರಣ ಸಂಬಂಧ ಸದ್ಯದ ಅರ್ಜಿಯ ಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಕ್ರಮ ಹಣ ವರ್ಗಾವಣೆ ಸಂಬಂದ ರಾಜಾ, ಕನಿಮೋಳಿ ಹಾಗೂ ಇತರರ ಕುರಿತು ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಇಡಿ ಮಾರ್ಚ್ 19ರಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಇದೇ ವೇಳೆ 2ಜಿ ಹಗರಣದಲ್ಲಿ ಆರೋಪಿಗಳ ಖುಲಾಸೆಗಳನ್ನು ಪ್ರಶ್ನಿಸಿದ್ದ ಸಿಬಿಐ ಮಾ.20ರಂದು ಕೋರ್ಟ್ ಮೆಟ್ಟಿಲೇರಿದೆ.
ಕಳೆದ ಡಿಸೆಂಬರ್ 21 ರಂದು 2ಜಿ ಹಗರಣ ಸಂಬಂಧ ವಿಶೇಷ ನ್ಯಾಯಾಲಯವು ಕೇಂದ್ರೀಯ ತನಿಖಾ ದಳ ಮತ್ತು ಇಡಿ ದಾಖಲಿಸಿದ ಪ್ರಕರಣಗಳಲ್ಲಿ ರಾಜಾ, ಕನಿಮೋಳಿ ಮತ್ತು ಇತರರನ್ನು ಖುಲಾಸೆಗೊಳಿಸಿತ್ತು.