ದೇಶ

ಆಸ್ಪತ್ರೆಗೆ ತೆರಳಲು ಜಯಲಲಿತಾ ನಿರಾಕರಿಸಿದ್ದರು: ತನಿಖಾ ಸಮಿತಿಗೆ ಶಶಿಕಲಾ ಹೇಳಿಕೆ

Manjula VN
ನವದೆಹಲಿ; 2016ರ ಸೆ.22 ರಂದು ಚೆನ್ನೈನಲ್ಲಿದ್ದ ಮನೆಯಲ್ಲಿನ ವಾಷ್ ರೂಮ್'ನಲ್ಲಿ ಜಯಲಲಿತಾ ಅವರು ಕುಸಿದು ಬಿದ್ದಿದ್ದರು. ನಂತರ ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದರು ಎಂದು ತಮಿಳುನಾಡು ರಾಜ್ಯ ಮಾಜಿ ಮುಖ್ಯಮಂತ್ರಿ ಎಐಎಡಿಎಂಕೆ ಅಧಿನಾಯಕಿ ದಿವಂಗತ ಜಯಲಲಿತಾ ಅವರನ್ನು ಆಸ್ಪತ್ರೆಗೆ ಸೇರಿಸುವುದಕ್ಕೂ ಮುನ್ನ ನಡೆದ ಘಟನೆಯನ್ನು ಆಪ್ತೆ ಜಯಲಲಿತಾ ಅವರು ತನಿಖಾ ಸಮಿತಿಯ ಮುಂದೆ ವಿವರಿಸಿದ್ದಾರೆ. 
ಜಯಲಲಿತಾ ಅವರ ನಿಧನದ ಕುರಿತಂತೆದ ಮದ್ರಾಸ್ ಹೈಕೋರ್ಟ್'ನ ನಿವೃತ್ತ ನ್ಯಾಯಮೂರ್ತಿ ಎ.ಆರುಮುಗಸ್ವಾಮಿ ನೇತೃತ್ವದ ಆಯೋಗ ತನಿಖೆ ನಡೆಸುತ್ತಿದ್ದು, ಆಯೋಗದ ಮುಂದೆ ಜಯಲಲಿತಾ ಆಪ್ತೆ ಶಶಕಲಾ ಅವರು ಅಫಿಡವಿಟ್ ಸಲ್ಲಿಸಿದ್ದಾರೆ. 
2016ರ ಸೆಪ್ಟೆಂಬರ್ 22 ರಂದು ಪೋಯಸ್ ಗಾರ್ಡನ್ ನಿವಾಸದ ಮೊದಲ ಮಹಡಿಯಲ್ಲಿನ ವಾಷ್ ರೂಮ್ ನಲ್ಲಿ ಜಯಲಲಿತಾ ಅವರು ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದರು. ಆದರೆ, ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದರು ಎಂದು ಶಶಿಕಲಾ ಅವರು ತಿಳಿಸಿದ್ದಾರೆ. 
ಅದೇ ಸಂದರ್ಭದಲ್ಲಿ ಜಯಲಲಿತಾ ಅವರ ಅನುಮತಿ ಮೇರೆಗೆ ನಾಲ್ಕು ವಿಡಿಯೋಗಳನ್ನು ಮಾಡಲಾಗಿತ್ತು. ಓ ಪನ್ನೀರ್ ಸೆಲ್ವಂ ಹಾಗೂ ತಂಬಿದೊರೈ ಸಹ ಜಯಲಲಿತಾ ಅವರನ್ನು ಭೇಟಿ ಮಾಡಿದ್ದರು. ಇದಲ್ಲದೆ. ಇಬ್ಬರು ಭದ್ರತಾಧಿಕಾರಿಗಳೂ ಸಹ ಜಯಲಲಿತಾ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದರು ಎಂದು ತಿಳಿಸಿದ್ದಾರೆ. 
ವಾಷ್ ರೂಮ್ ನಲ್ಲಿ ಕುಸಿದು ಬಿದ್ದ ಸಂದರ್ಭದಲ್ಲಿ ಸಹಾಯಕ್ಕಾಗಿ ಜಯಲಲಿತಾ ಅವರು ನನ್ನನ್ನು ಕೂಗಿದರು. ಈ ವೇಳೆ ನಾನು ಆಸ್ಪತ್ರೆಗೆ ಹೋಗೋಣ ಎಂದು ಸಲಹೆ ನೀಡಿದೆ. ಆದರೆ, ಇದಕ್ಕೆ ಅವರು ನಿರಾಕರಿಸಿದ್ದರು. ನಂತರ ನಾನು ಆ್ಯಂಬುಲೆನ್ಸ್ ಗಾಗಿ ವೈದ್ಯರಿಗೆ ಕರೆ ಮಾಡಿದ್ದೆ. ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಆ್ಯಂಬುಲೆನ್ಸ್ ನಲ್ಲಿ ಜಯಾಲಲಿತಾ ಅವರಿಗೆ ಪ್ರಜ್ಞೆ ಮರಳಿತ್ತು. 
ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ಹಾಗೂ ಶಿಕ್ಷೆಗೆ ಸಂಬಂಧಪಟ್ಟಂತೆ 2014ರಲ್ಲಿ ಜಯಲಲಿತಾ ಅವರು ಒತ್ತಡಕ್ಕೆ ಒಳಗಾಗಿದ್ದರು. ಇದರಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು ಎಂದು ಶಶಿಕಲಾ ತಮ್ಮ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆಂದು ತಿಳಿದುಬಂದಿದೆ.
SCROLL FOR NEXT