ನವದೆಹಲಿ: 2018 ರ ಅಂತ್ಯಕ್ಕೆ ದೇಶಾದ್ಯಂತ 1 ಲಕ್ಷ ವೈ-ಫೈ ಹಾಟ್ ಸ್ಪಾಟ್ ಗಳನ್ನು ಕಲ್ಪಿಸಲು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಚಿಂತನೆ ನಡೆಸಿದೆ.
ಈಗಾಗಲೇ 18,000 ಹಾಟ್ ಸ್ಪಾಟ್ ಗಳನ್ನು ಬಿಎಸ್ಎನ್ಎಲ್ ಕಲ್ಪಿಸಲಾಗಿದೆ ಎಂದು ಬಿಎಸ್ಎನ್ಎಲ್ ಅಧ್ಯಕ್ಷ ಹಾಗೂ ಎಂಡಿ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ.
ಬಿಎಸ್ಎನ್ಎಲ್ ಕ್ವಾಡ್ಜೆನ್ ಸಹಭಾಗಿತ್ವದಲ್ಲಿ ಗುಜರಾತ್ ನ ಉಡ್ವಾಡ ಗ್ರಾಮದಲ್ಲಿ ಉಚಿತ ವೈ-ಫೈ ಸೌಲಭ್ಯವನ್ನೂ ಕಲ್ಪಿಸಿದ್ದು ಸುಮಾರು 6,000 ಜನರಿಗೆ ಉಪಯೋಗವಾಗಲಿದೆ ಎಂದು ಬಿಎಸ್ಎನ್ಎಲ್ ಹೇಳಿದೆ. ಹಾಟ್ ಸ್ಪಾಟ್ ಗಳು ಶೇ.90 ರಷ್ಟು ಗ್ರಾಮಕ್ಕೆ ಲಭ್ಯವಾಗಲಿದೆ.