ಚಂದ್ರಬಾಬು ನಾಯ್ಡು 
ದೇಶ

ಮತ್ತೆ ದೊಡ್ಡ ಮೌಲ್ಯದ ನೋಟುಗಳ ನಿಷೇಧಕ್ಕೆ ಚಂದ್ರಬಾಬು ನಾಯ್ಡು ಒತ್ತಾಯ

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಗುರುವಾರ ಮತ್ತೆ ದೊಡ್ಡ ಮೌಲ್ಯದ....

ಅಮರಾವತಿ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಗುರುವಾರ ಮತ್ತೆ ದೊಡ್ಡ ಮೌಲ್ಯದ ನೋಟುಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಹಿಂದೆ 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧಿಸುವತೆ ಒತ್ತಾಯಿಸಿದ್ದ ಆಂಧ್ರ ಸಿಎಂ ಈಗ ಮತ್ತೆ 2000 ಹಾಗೂ 500 ರುಪಾಯಿ ನೋಟ್ ಗಳನ್ನು ನಿಷೇಧಿಸಬೇಕು ಎಂದಿದ್ದಾರೆ. ಅಲ್ಲದೆ ದೊಡ್ಡ ಮೌಲ್ಯದ ನೋಟ್ ಗಳನ್ನು ನಿಷೇಧಿಸುವುದರಿಂದ ಭ್ರಷ್ಟಾಚಾರ ಮತ್ತು ಚುನಾವಣೆಯಲ್ಲಿ ಹಣಬಲಕ್ಕೆ ಕಡಿವಾಣ ಹಾಕಬಹುದು ಎಂದು ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ಮಾತನಾಡಿದ ಆಂಧ್ರ ಸಿಎಂ, ಕೇಂದ್ರ ಸರ್ಕಾರ ಈ ಕೂಡಲೇ 2000 ಮತ್ತು 500 ರುಪಾಯಿ ನೋಟುಗಳನ್ನು ಹಿಂಪಡೆಯಬೇಕು ಮತ್ತು ಆನ್ ಲೈನ್ ವ್ಯವಹಾರಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಹೇಳಿದ್ದಾರೆ.
ಈ ಹಿಂದೆ 500 ಹಾಗೂ 1000 ರುಪಾಯಿ ನೋಟ್ ಗಳನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದ ಮೊದಲ ರಾಜಕಾರಣಿ ತಾವೇ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran conflict: ಟೆಹ್ರಾನ್'ನಲ್ಲಿ ಭಾರೀ ಸ್ಫೋಟ, ಬಾಂಬ್ ದಾಳಿ ಮತ್ತಷ್ಟು ಹೆಚ್ಚಲಿದೆ ಎಂದು ಅಮೆರಿಕಾ ಎಚ್ಚರಿಕೆ

ಟ್ರಂಪ್ ಹತ್ಯೆಗೆ ಸಂಚು: ಇರಾನ್ ಜೊತೆಗೆ ನಂಟು ಹೊಂದಿದ ಪಾಕ್ ವ್ಯಕ್ತಿ ದೋಷಿ ಎಂದ ಅಮೆರಿಕ ನ್ಯಾಯಾಲಯ!

T20 ವಿಶ್ವಕಪ್ 2026: ಭಾರತದ ವಿರುದ್ಧ ಸ್ಫೋಟಕ ಶತಕ: Jacob Bethell ದಾಖಲೆಗಳ ಸುರಿಮಳೆ

Dhurandhar The Revenge trailer: ಪಾಕ್‌ನ ಭವಿಷ್ಯವನ್ನು ಭಾರತ ಬರೆಯಲಿದೆ! ಏನಿದು ರಣವೀರ್ ಸಿಂಗ್ ಶಪಥ?

T20 ವಿಶ್ವಕಪ್ 2026: '499 ರನ್, 34 ಸಿಕ್ಸರ್, 39 ಬೌಂಡರಿ': T20 ಇತಿಹಾಸದ ಅಪರೂಪದ ದಾಖಲೆ ಬರೆದ India vs England ಪಂದ್ಯ

SCROLL FOR NEXT