ಬ್ರಹ್ಮೋಸ್‌ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವೀ ಪರೀಕ್ಷೆ 
ದೇಶ

ಬ್ರಹ್ಮೋಸ್‌ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವೀ ಪರೀಕ್ಷೆ

ಭಾರತವು ಸೂಪರ್‌ ಸಾನಿಕ್‌ ಕ್ರೂಯಿಸ್‌ ಮಿಸೈಲ್‌ ಬ್ರಹ್ಮೋಸ್‌ ನ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ

ಪೋಖರಣ್(ರಾಜಸ್ಥಾನ): ಭಾರತವು  ಸೂಪರ್‌ ಸಾನಿಕ್‌ ಕ್ರೂಯಿಸ್‌ ಮಿಸೈಲ್‌ ಬ್ರಹ್ಮೋಸ್‌ ನ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ 
ರಾಜಸ್ಥಾನದ ಪೋಖರಣ್ ನಲ್ಲಿ ಕ್ಷಿಪಣಿ ಪರೀಕ್ಷೆ ನಡೆದಿದೆ. ಈ ಹಿಂದೆ 2017ರಲ್ಲಿ  ವಾಯುಪಡೆಯ ಸುಖೋಯಿ  ಯುದ್ಧ ವಿಮಾನದ ಮೂಲಕ ಕ್ರೂಯಿಸ್‌ ಮಿಸೈಲನ್ನು  ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ನಡೆಸಲಾಗಿತ್ತು.
ಬ್ರಹ್ಮೋಸ್ ಕ್ಷಿಪಣಿಗಳನ್ನು ಭಾರತ ಹಾಗೂ ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು ಭಾರತದ ಬ್ರಹ್ಮಪುತ್ರಾ ಹಾಗೂ ರಷ್ಯಾದ ಮೋಸ್‌ಕ್ವಾ ನದಿಯ ಹೆಆರನ್ನು ಸೇರಿಸಿ ಕ್ಷಿಪಣಿಗೆ ನಾಮಕರಣ ಮಾಡಲಾಗಿತ್ತು. 
ಮಧ್ಯಮ ವ್ಯಾಪ್ತಿಯ ರಾಮ್‌ಜೆಟ್‌ ಸೂಪರ್‌ಸಾನಿಕ್‌ ಕ್ರೂಯಿಸ್‌ ಕ್ಷಿಪಣಿಯಾಗಿರುವ ಬ್ರಹ್ಮೋಸ್ ನ್ನು ಭೂಮಿ, ಆಕಾಶ ಹಾಗು ಸಮುದ್ರಗಳಲ್ಲಿ ಉಡಾವಣೆ ಮಾಡಬಹುದು. ಕಳೆದ ವರ್ಷ ದುಬೈ ನಲ್ಲಿ ಆಯ್ಯೋಜಿತವಾದ ಏರ್ ಶೋ ನಲ್ಲಿ ಈ ಕ್ಷಿಪಣಿಯನ್ನು ಪ್ರದರ್ಶ್ನಕ್ಕಿಡಲಾಗಿತ್ತು.  ಆವೇಳೆ ಅನೇಕ ರಾಷ್ಟ್ರಗಳು ಇದರತ್ತ ಆಕರ್ಷಿತವಾಗಿದ್ದವು.
ಬ್ರಹ್ಮೋಸ್ ನ್ನು 2006 ರಿಂದ ನೌಕಾಪಡೆ ಮತ್ತು ಸೈನ್ಯಕ್ಕೆ ಸೇರ್ಪಡೆ ಮಾಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!