ಬೆಂಗಳೂರು: ಪ್ರಧಾನಿಯವರ ಕಳೆದು ಹೋಗಿದ್ದ ಅಂಕ ಪಟ್ಟಿ ಮಾಜಿ ಸಂಸದೆ ರಮ್ಯಾಗೆ ದೊರಕಿದೆ! ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಮೋದಿ ಅವರ ಅಂಕ ಪಟ್ಟಿಯನ್ನು ಪ್ರಕಟಿಸಿದ್ದಾರೆ.
’ಬ್ರೇಕಿಂಗ್ ನ್ಯೂಸ್!’ ಎಂದು ಬರೆದು ಅದರ ಕೆಳಗೆ ರಿಪೋರ್ಟ್ ಕಾರ್ಡ್ ಎಂಬ ತಲೆಬರಹದ ಅಂಕ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಉದ್ಯೋಗ ಸೃಷ್ಟಿ , ರಕ್ಷಣಾ ಉಪಕರಣಗಳ ಖರೀದಿ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿ ಪ್ರಧಾನಿಗಳಿಗೆ ಶ್ರೇಣಿ (ಗ್ರೇಡ್) ಗಳನ್ನು ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಶೋಕ ಚಕ್ರದ ಚಿಹ್ನೆಯನ್ನು ಬಳಸಿ ಕೇಸರಿ ಬಣ್ಣದ ಕಾರ್ಡ್ ನ ಚಿತ್ರವನ್ನು ಪೋಸ್ಟ್ ಮಾಡಿರುವ ರಮ್ಯಾ ಮೋದಿ ಅವರ ಒಟ್ಟಾರೆ ಕೆಲಸಕ್ಕೆ 'ಡಿ ಗ್ರೇಡ್' ನೀಡಲಾಗಿದೆ.
ಇನ್ನು ಉದ್ಯೋಗ ಸೃಷ್ಟಿ ಪರೀಕ್ಷೆಯಲ್ಲಿ – ಡಿ ಗ್ರೇಡ್, ರಕ್ಷಣಾ ಪರೀಕ್ಷೆಯಲ್ಲಿ – ಸಿ, ಆರೋಗ್ಯ ಪರೀಕ್ಷೆಯಲ್ಲಿ – ಎಫ್, ಆರ್ಥಿಕ ಪರೀಕ್ಷೆಯಲ್ಲಿ – ಎಫ್, ಮಹಿಳಾ ಸುರಕ್ಷತೆ ಪರೀಕ್ಷೆಯಲ್ಲಿ – ಸಿ, ಸ್ಟೋರಿ ಟೆಲ್ಲಿಂಗ್‍ನಲ್ಲಿ – ಎ + + ಹಾಗೆಯೇ ಇತರೆ ವಿಭಾಗಗಳು – ಹಿಂಸೆ – ಯೆಸ್, ಕೋಮುವಾದ – ಯೆಸ್ ಎಂದು ಬರೆಯಲಾಗಿದೆ.
ಭಯಂಕರವಾಗಿ ವರ್ತಿಸಿ ದ್ವೇಷ ಹರಡುವ ಈ ವ್ಯಕ್ತಿ ದೇಶ ಮುನ್ನಡೆಸುವುದಕ್ಕೆ ಅಸಮರ್ಥರಾಗಿದ್ದಾರೆ. ಎಂದು ವ್ಯಂಗ್ಯವಾಡಲಾಗಿದೆ.
ರಮ್ಯಾ ಅವರ ಟ್ವೀಟ್ ನೋಡಿದ ಮೋದಿ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಸಾಮಾಜಿಕ ಜಾಲತಾಣದಲ್ಲಿಯೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.