ದೇಶ

ಕಾಂಗ್ರೆಸ್ ಬಳಕೆದಾರರ ಡಾಟಾ ಸಿಂಗಪೂರ್ ಪಾಲು: ಬಿಜೆಪಿ

Srinivas Rao BV
ನವದೆಹಲಿ: ಆಪ್ ಬಳಕೆದಾರರ ಡಾಟಾವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಷಯವಾಗಿ ಕಾಂಗ್ರೆಸ್-ಬಿಜೆಪಿ ನಡುವೆ ದೋಷಾರೋಪಣೆಗಳ ಸರಣಿ ಮುಂದುವರೆದಿದ್ದು, ಕಾಂಗ್ರೆಸ್ ತನ್ನ ಆಪ್ ಬಳಕೆದಾರರ ಡಾಟಾವನ್ನು ಸಿಂಗಪೂರ್ ನ ಮೂಲದ ಸಂಸ್ಥೆಯೊಂದಿಗೆ ಹಂಚಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. 
"ನಾನು ರಾಹುಲ್ ಗಾಂಧಿ, ಭಾರತದ ಹಳೆಯ ಪಕ್ಷದ ಅಧ್ಯಕ್ಷ, ನೀವು ನಮ್ಮ ಆಪ್ ಗೆ ಸೈನ್ ಅಪ್ ಮಾಡಿದರೆ ನಾನು ನಿಮ್ಮ ಡಾಟಾವನ್ನು ಸಿಂಗಪೂರ್ ನಲ್ಲಿರುವ ನನ್ನ ಸ್ನೇಹಿತರಿಗೆ ನೀಡುತ್ತೇನೆ" ಎಂದು ಬಿಜೆಪಿ ನಾಯಕ ಅಮಿತ್ ಮಾಲ್ವಿಯಾ ವ್ಯಂಗ್ಯ ಧಾಟಿಯಲ್ಲಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಪಕ್ಷದ ವೆಬ್ ಸೈಟ್ ನ ಪ್ರೈವೆಸಿ ಪಾಲಿಸಿ ಸೆಟ್ಟಿಂಗ್ ಗಳನ್ನು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ. 
SCROLL FOR NEXT