ಲಖನೌ: 2019 ರ ಲೋಕಸಭಾ ಚುನಾವಣೆಗೆ ಎಸ್ ಪಿ-ಬಿಎಸ್ ಪಿ ಮೈತ್ರಿ ಬಗ್ಗೆ ಮಾಯಾವತಿ ಸುಳಿವು ನೀಡಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಬಿಜೆಪಿಯನ್ನು ಮಣಿಸಲು ಎಸ್ ಪಿಯೊಂದಿಗಿನ ಮೈತ್ರಿ ಅಗತ್ಯವಿದೆ ಎಂದು ಪಕ್ಷದ ಶಾಸಕರಿಗೆ ಮಾಯಾವತಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿಯ ಷಡ್ಯಂತ್ರಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ಏನೇ ನಕಾರಾತ್ಮಕವಾಗಿ ಹೇಳಿದ್ದರೂ ಅದು ನಮ್ಮ ಮೈತ್ರಿಯ ಬಗ್ಗೆ ಇರುವ ಭಯ ಎಂದು ಮಾಯಾವತಿ ಹೇಳಿದ್ದಾರೆ.
ಎಸ್ ಪಿಯೊಂದಿಗಿನ ಮೈತ್ರಿ ಪಕ್ಷ ಅಥವಾ ತಮ್ಮ ಸ್ವಾರ್ಥಕ್ಕಾಗಿ ಅಲ್ಲ, ಆದರೆ ಮೋದಿ ಸರ್ಕಾರವನ್ನು ಕೊನೆಗೊಳಿಸಬೇಕೆಂಬುದು ಮೈತ್ರಿಯ ಉದ್ದೇಶವಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.