ದೇಶ

ನೌಕಾಪಡೆ ಹಾಗೂ ಸೇನೆಯಲ್ಲಿ 274 ಪೈಲಟ್ ಹುದ್ದೆ ಖಾಲಿ-ಸುಭಾಶ್ ಭಾಮ್ರೆ

Nagaraja AB

ನವದೆಹಲಿ: ನೌಕಪಡೆ ಹಾಗೂ ಸೇನೆಯಲ್ಲಿ 274 ಪೈಲಟ್ ಹುದ್ದೆಗಳು ಖಾಲಿ ಇರುವುದಾಗಿ ಕೇಂದ್ರಸರ್ಕಾರ ಲೋಕಸಭೆಗೆ ಇಂದು ತಿಳಿಸಿದೆ.

ಸೇನೆಯಲ್ಲಿ 794 ಪೈಲಟ್ ಹುದ್ದೆಗಳಿಗಾಗಿ ಮಂಜೂರು ಮಾಡಲಾಗಿದ್ದು,  192 ಹುದ್ದೆಗಳು ಖಾಲಿ ಇವೆ. ನೌಕಪಡೆಯಲ್ಲಿ 735 ಪೈಲಟ್ ಹುದ್ದೆಗಳು ಮಂಜೂರಾಗಿದ್ದು, 82 ಹುದ್ದೆಗಳಿಗೆ ಖಾಲಿ ಇವೆ ಎಂದು  ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಶ್ ಭಾಮ್ರೆ ಲಿಖಿತ ಉತ್ತರದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ವಾಯುಪಡೆಯಲ್ಲಿ ಪೈಲಟ್ ಗಳ ಕನಿಷ್ಠ ಕೊರತೆ ಎದುರಾಗಿದೆ. ಆದಾಗ್ಯೂ, ಪ್ರಸ್ತುತದಲ್ಲಿನ ಕಾರ್ಯಾಚರಣೆಗೆ ಅಗತ್ಯಕ್ಕನುಗುಣವಾಗಿ ವಾಯುಪಡೆ ಪೈಲಟ್ ಲಭ್ಯವಿರುವುದಾಗಿ ಅವರು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರತೀಯ ಸಾಗರೋತ್ತರ ವಲಯದ ವ್ಯಾಪ್ತಿ ವಿಸ್ತಾರಗೊಂಡಿದ್ದು,  ಭೌಗೋಳಿಕ ಕಾರ್ಯತಂತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಡಲ ತೀರ ಪ್ರದೇಶದಲ್ಲಿ ನೌಕಾ ಸಿಬ್ಬಂದಿ ನಿಗಾ ವಹಿಸಿದ್ದಾರೆ.  ಸಾಗರೋತ್ತರ ಪ್ರದೇಶಗಳಲ್ಲಿ ಭಾರತ ನೌಕಪಡೆ ಇನ್ನಿತರ ವಿದೇಶಗಳ ಸಹಕಾರದೊಂದಿಗೆ ಜಂಟಿಯಾಗಿ ಮೇಲ್ವಿಚಾರಣೆ ಮಾಡುತ್ತಿಲ್ಲ ಎಂದು ಸುಭಾಶ್ ಭಾಮ್ರೆ ಸ್ಪಷ್ಪಪಡಿಸಿದ್ದಾರೆ.

ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಸಚಿವರು. 73 ರಸ್ತೆಗಳನ್ನು ಇಂಡೋ ಚೀನಾ ಬಾರ್ಡರ್ ರಸ್ತೆಗಳೆಂದು ಸರ್ಕಾರ ಗುರುತಿಸಿದೆ. ಈ ಪೈಕಿ 34 ರಸ್ತೆಗಳು ಪೂರ್ಣಗೊಂಡಿವೆ. ಇನ್ನುಳಿದ 39 ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

 ಸಿಕ್ಕಿಂ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ , ಉತ್ತರ ಪ್ರದೇಶಗಳಲ್ಲಿನ ಗಡಿ ರಸ್ತೆಗಳ ಕಾಮಗಾರಿಗೆ ಸರ್ಕಾರ ಕ್ರಮ ಕೈಗೊಂಡಿದೆ.

 22,225,17 ಕಿಲೋ ಮೀಟರ್ ದೂರದ ರಸ್ತೆಗಳನ್ನು ಗಡಿ ರಸ್ತೆಯ ಸಂಸ್ಥೆಗಳಿಗೆ ಒಪ್ಪಿಸಲಾಗಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 7.122 ಕಿಲೋ ಮೀಟರ್ , ಅರುಣಾಚಲ ಪ್ರದೇಶದಲ್ಲಿ 5, 267 ಕಿಲೋ ಮೀಟರ್ ರಸ್ತೆ ಸೇರಿವೆ ಎಂದು ಅವರು ಹೇಳಿದ್ದಾರೆ.


SCROLL FOR NEXT