ದೇಶ

10ನೇ ತರಗತಿ ಪಾಸಾಗಬೇಕೆಂಬ ಛಲ: ಮಗನೊಂದಿಗೆ 10ನೇ ತರಗತಿ ಪರೀಕ್ಷೆ ಬರೆಯುತ್ತಿರುವ ತಾಯಿ

Vishwanath S
ಲೂಧಿಯಾನ: ಕೌಟುಂಬಿಕ ಸಮಸ್ಯೆಗಳಿಂದಾಗಿ ಶಾಲೆ ತೊರೆದಿದ್ದ ಗೃಹಿಣಿಯೊಬ್ಬರು ಇದೀಗ ತನ್ನ ಮಗನ ಜತೆಗೆ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾರೆ. 
44ರ ಹರೆಯದ ರಜನಿ ಬಾಲಾ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ 10ನೇ ತರಗತಿ ಪರೀಕ್ಷೆಗೆ ಕೂರಲು ಕೆಲ ತಿಂಗಳುಗಳ ರಜೆ ಪಡೆದು ಶಾಲೆಗೆ ಹೋಗಿ ವಿದ್ಯಾರ್ಥಿನಿಯಾಗಿ ಕುಳಿತು ಪಾಠಗಳನ್ನು ಕಲಿತು ಇದೀಗ ತನ್ನ ಪುತ್ರನೊಂದಿಗೆ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. 
ನಾನು 10ನೇ ತರಗತಿ ಓದಿ ಮುಗಿಸಲೇಬೇಕು. ಪರೀಕ್ಷೆ ಪಾಸು ಮಾಡಲೇಬೇಕು ಎಂಬ ಹಠ ನನ್ನಲ್ಲಿತ್ತು. ಆರಂಭದಲ್ಲಿ ನಾನು ಈ ವಯಸ್ಸಿನಲ್ಲಿ ಶಾಲೆಗೆ ಹೋಗಿ ಕೂರುವುದಕ್ಕೆ ತುಂಬಾ ಸಂಕೋಚವಾಗಿತ್ತು. ಆದರೂ ಅದನ್ನು ಬದಿಗಿಟ್ಟು 10ನೇ ತರಗತಿ ಶಿಕ್ಷಣ ಪೂರೈಸಿ ಈಗ ಪರೀಕ್ಷೆ ಬರೆಯುತ್ತಿದ್ದೇನೆ ಎಂದು ರಜನಿ ಬಾಲಾ ಹೇಳಿದರು. 
ಕೌಟುಂಬಿಕ ಸಮಸ್ಯೆಗಳಿಂದಾಗಿ ರಜನಿ ಬಾಲಾ ಅವರು 1989ರಲ್ಲಿ 9ನೇ ತರಗತಿಯ ಓದಿನೊಂದಿಗೆ ಶಾಲೆಯಿಂದ ಹೊರಬಿದ್ದಿದ್ದರು. ನನಗೆ ಈಗ 10ನೇ ತರಗತಿ ಮುಗಿಸಿ ಪರೀಕ್ಷೆ ಎದುರಿಸಲು ನನ್ನ ಪತಿ ರಾಜ್ ಕುಮಾರ್ ಸಾಥಿ ಮತ್ತು ಪುತ್ರಿಯರು ತುಂಬ ಸಪೋರ್ಟ್ ನೀಡಿದ್ದಾರೆ ಎಂದರು. 
SCROLL FOR NEXT