ಶ್ರೀನಗರ: ಮನೆಗೆ ಬರುವಂತೆ ತಾಯಿ ನೀಡಿದ ಕರೆಗೆ ಓಗೊಟ್ಟು ಕಾಶ್ಮೀರದಲ್ಲಿ ಭಯೋತ್ಪಾದನೆ ತೊರೆದು ಉಗ್ರನೋರ್ವ ಮನೆಗೆ ವಾಪಸ್ಸಾಗಿದ್ದಾನೆ.
ಈ ಬಗ್ಗೆ ಸ್ವತಃ ಪೊಲೀಸರು ಮಾಹಿತಿ ನೀಡಿದ್ದು, ಟ್ವೀಟ್ ಕೂಡಾ ಮಾಡಿದ್ದಾರೆ. ಆದರೆ ಉಗ್ರನ ಬಗ್ಗೆ ಅಥವಾ ಉಗ್ರನ ಕುಟುಂಬದ ಬಗ್ಗೆ ಮಾಹಿತಿ ನೀಡಿಲ್ಲ. ಭಯೋತ್ಪಾದನೆ ತೊರೆದು ಮನೆಗೆ ವಾಪಸ್ಸಾಗುವಂತೆ ಮತ್ತೋರ್ವ ತಾಯಿ ತನ್ನ ಮಗನಿಗೆ ಕರೆ ನೀಡಿದ್ದಾರೆ.
ಮಿಮುನಾ ಮುಷ್ತಾಕ್ ಎಂಬ ಮಹಿಳೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಾಪತ್ತೆಯಾಗಿರುವ ಮಗನಿಗೆ ವಾಪಸ್ ಬರುವಂತೆ ಕೋರಿದ್ದರು. ಈಕೆಯ 19 ವರ್ಷದ ಮಗ ಫಹಾದ್ ಮುಶ್ತಾಕ್ ವಾಜಾ ಲಷ್ಕರ್ ಉಗ್ರ ಸಂಘಟನೆ ಸೇರಿದ್ದ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.