ದೇಶ

ಉತ್ತರ ಪ್ರದೇಶ ಸರ್ಕಾರದಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೆಸರು ಬದಲಾವಣೆ!

Raghavendra Adiga
ಲಖನೌ(ಉತ್ತರ ಪ್ರದೇಶ): ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಇನ್ನು ಮುಂದೆ ರಾಜ್ಯದ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ಡಾ.ಭೀಮ್‌ರಾವ್‌ ರಾಮ್‌ಜೀ ಅಂಬೇಡ್ಕರ್‌’ ಎಂದು ಬಳಸಬೇಕೆಂದು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ.
ಯೋಗಿ ಆದಿತ್ಯನಾಥ್ ಸರ್ಕಾರದ ಈ ಆದೇಶ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವಂತಿದೆ.
ಉತ್ತರ ಪ್ರದೇಶದ  ಎಲ್ಲ ದಾಖಲೆಗಳಲ್ಲಿ ಇನ್ನು ಮುಂದೆ ಪರಿಸ್ಕೃತ ಹೆಸರನ್ನೆ ಬಳಸಬೇಕು. ಎಂದು ಸಾರ್ವಜನಿಕ ಆಡಳಿತದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್‌ ಮಂಗಳವಾರ ಸುತ್ತೋಲೆ ಹೊರಡಿಸಿದ್ದರು. ಬುಧವಾರ  ಈ ಸಂಬಂಧ ರಾಜ್ಯಪಾಲ ರಾಮ್ ನಾಯ್ಕ್ ಅಂಕಿತ ಪಡೆದ ರಾಜ್ಯ ಸರ್ಕಾರ ಈ  ಆದೇಶ ಜಾರಿ ಮಾಡಿದೆ. ಆದೇಶದ ಪ್ರತಿಗಳು ಅಲಹಾಬಾದ್ ಮತ್ತು ಲಖನೌದಲ್ಲಿನ ಹೈಕೋರ್ಟ್‌ ಪೀಠದ ರೆಜಿಸ್ಟ್ರಾರ್‌ ಕಚೇರಿಗಳಿಗೂ ತಲುಪಿದೆ.
ನೂತನ ಆದೇಶದಿಂದಾಗಿ ಅಂಬೇಡ್ಕರ್ ಹೆಸರಿನ ಹಿಂದಿ ಭಾಷಾ ಉಚ್ಚಾರಣೆ ಸಹ ಬದಲಾಗಲಿದೆ ಅಂಬೇಡ್ಕರ್​ ಬದಲು ಆಂಬೇಡ್ಕರ್ ಎಂದಾಗಲಿದೆ. . 
ಹಿಂದಿ ಭಾಷಾ ರಾಜ್ಯಗಗಳಲ್ಲಿ ಅಂಬೇಡ್ಕರ್ ಹೆಸರನ್ನು ತಪ್ಪಾಗಿ ಬರೆಯುತ್ತಿದ್ದರು. ಮುಖ್ಯವಾಗಿ ಅವರ ಹೆಸರನ್ನು ಭೀಮ್ ಮತ್ತು ರಾವ್ ಎಂದು ಎರಡು ಪದಗಳಾಗಿ ವಿಂಗಡಿಸಿ ಬರೆಯಲಾಗುತ್ತಿತ್ತು. ಆದರೆ 'ಭೀಮರಾವ್ ' ಒಂದೇ ಪದವಾಗಿದೆ. ಅಂಬೇಡ್ಕರ್ ತಮ್ಮ ಹಿಂದಿ ಸಹಿಯಲ್ಲಿ ಭೀಮರಾವ್ ರಾಮ್‌ಜೀ  ಅಂಬೇಡ್ಕರ್ ಎಂದೇ ಬಳಸುತ್ತಿದ್ದರು. ಇಂಗ್ಲಿಷ್ ನಲ್ಲಿ ಇದನ್ನೇ  ಬಿ.ಆರ್.ಅಂಬೇಡ್ಕರ್ ಎಂದು ಬರೆದುಕೊಳ್ಳುತ್ತಿದ್ದರು. ರಾಜ್ಯಪಾಲ ರಾಮ್ ನಾಯ್ಕ್ ಹೇಳಿದ್ದಾರೆ.
ಅಂಬೇಡ್ಕರ್ ಅವರ ತಂದೆಯ ಹೆಸರು ರಾಮ್​ಜಿ ಎಂದಿದ್ದು ಮಹಾರಾಷ್ಟ್ರ ಸೀಮೆಯಲ್ಲಿ ತನ್ನ ಹೆಸರಿನ ಮಧ್ಯೆ ತಂದೆಯ ಹೆಸರನ್ನು ಸೇರಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅಂಬೇಡ್ಕರ್ ಸಹ ಮಹಾರಾಷ್ಟ್ರದವರೇ ಆಗಿದ್ದಾರೆ. ಮೇಲಾಗಿ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿಯೇ ಅಂಬೇಡ್ಕರ್‌ ತಮ್ಮ ಹೆಸರನ್ನು 'ಡಾ.ಭೀಮ್‌ರಾವ್‌ ರಾಮ್‌ಜೀ ಆಂಬೇಡ್ಕರ್‌’ ಎಂದು ಉಲ್ಲೇಖಿಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
SCROLL FOR NEXT