ಲಕ್ನೋ: ಅಲಹಾಬಾದ್ ನಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ತ್ರಿವೇಣಿಪುರಂ ನಲ್ಲಿರುವ ಪಾರ್ಕ್ ವೊಂದರಲ್ಲಿ ಅಂಬೇಡ್ಕರ್ ಪ್ರತಿಮೆಯ ತಲೆ ಭಾಗವನ್ನು ತುಂಡರಿಸಲಾಗಿದೆ,
ಪ್ರಕರಣ ನಮ್ಮ ಗಮನಕ್ಕೆ ಬಂದಿದ್ದು, ಧ್ವಂಸಗೊಳಿಸಿರುವವರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಶೀಘ್ರವೇ ಆರೋಪಿಗಳನ್ನು ಬಂದಿಸಿವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಏರಿಯಾದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ, ಇದೇ ರೀತಿಯ ಪ್ರಕರಣ ಮಾರ್ಚ್ 7 ರಂದು ಮೀರತ್ ನಲ್ಲಿ ನಡೆದಿತ್ತು.