ತ್ರಿಪುರಾ ಸಿಎಂ 
ದೇಶ

ತಮ್ಮ ಸರ್ಕಾರವನ್ನು ಗೇಲಿಮಾಡುವವರ, ತಿವಿಯುವವರ ಉಗುರನ್ನು ಕತ್ತರಿಸುತ್ತಾರಂತೆ ತ್ರಿಪುರಾ ಸಿಎಂ!

ಅಧಿಕಾರಕ್ಕೆ ಬಂದು ಕೆಲವೇ ತಿಂಗಳು ಕಳೆಯುತ್ತಿದ್ದಂತೆಯೇ ಸಾಲು ಸಾಲು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗುವಂತಹ ಹೇಳಿಕೆ ನೀಡಿದ್ದಾರೆ.

ನವದೆಹಲಿ: ಅಧಿಕಾರಕ್ಕೆ ಬಂದು ಕೆಲವೇ ತಿಂಗಳು ಕಳೆಯುತ್ತಿದ್ದಂತೆಯೇ ಸಾಲು ಸಾಲು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗುವಂತಹ ಹೇಳಿಕೆ ನೀಡಿದ್ದಾರೆ. 
ಆಂಗ್ಲ ಸುದ್ದಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಬಿಪ್ಲಬ್ ದೆಬ್ ತಮ್ಮ ಸರ್ಕಾರದ ಬಗ್ಗೆ ಗೇಲಿ ಮಾಡಿ, ಸರ್ಕಾರವನ್ನು ತಿವಿಯುವವರ ಉಗುರನ್ನು ಕತ್ತರಿಸುವುದಾಗಿ ಹೇಳಿದ್ದಾರೆ.  ಇದಕ್ಕೆ ತರಕಾರಿ ಮಾರುವವರ ಉದಾಹರಣೆಯನ್ನೂ ನೀಡಿರುವ ಅವರು, ಬೆಳಿಗ್ಗೆ 8 ಗಂಟೆಗೆ ತರಕಾರಿ ಮಾರುವವರು ತರಕಾರಿ ತರುತ್ತಾರೆ, ಆದರೆ ಗ್ರಾಹಕರು ಅದನ್ನು ಪರೀಕ್ಷಿಸಲು ಚಿವುಟುವುದರಿಂದ ಕೇವಲ ಒಂದೇ ಗಂಟೆಯಲ್ಲಿ ಹಾಳಾಗುತ್ತದೆ, ಇದೇ ಪರಿಸ್ಥಿತಿ ನನ್ನ ಸರ್ಕಾರಕ್ಕೆ ಆಗಬಾರದು, ನನ್ನ ಸರ್ಕಾರದಲ್ಲಿ ಯಾವುದೇ ಹಸ್ತಕ್ಷೇಪ ಇರಬಾರದು, ಯಾರಾದರೂ ಮಧ್ಯಪ್ರವೇಶಿಸುವುದಕ್ಕೆ ಯತ್ನಿಸಿದರೆ ಅವರ ಉಗುರನ್ನು ಕತ್ತರಿಸುತ್ತೇನೆ, ನನ್ನ ಸರ್ಕಾರವನ್ನು ಯಾರೂ ಮುಟ್ಟುವಂತಿಲ್ಲ ಎಂದು ದೇಬ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!