ಸಂಸತ್ ಸ್ಥಾಯಿಸಮಿತಿಯಿಂದ ವೇತನ ಸಂಹಿತೆ ಮಸೂದೆಯ ವರದಿ ಅಂತಿಮ: ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್
ನವದೆಹಲಿ: ವೇತನ ಸಂಹಿತೆ ಮಸೂದೆ 2017 ಯ ಕುರಿತ ವರದಿಯನ್ನು ಸಂಸತ್ ಸ್ಥಾಯಿ ಸಮಿತಿ ಅಂತಿಮಗೊಳಿಸಿದೆ ಎಂದು ಕಾರ್ಮಿಕ ಸಚಿವ ಸಂತೋಶ್ ಗಂಗ್ವಾರ್ ಹೇಳಿದ್ದಾರೆ.
ಮಸೂದೆಗೆ ಮುಂಗಾರು ಅಧಿವೇಶನದಲ್ಲಿ ಅಂಗೀಕಾರ ಸಿಗುವ ಸಾಧ್ಯತೆ ಇದ್ದು, ಕಾಯ್ದೆಯಾಗಿ ಪರಿವರ್ತನೆಯಾದಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ ಮಾನದಂಡವನ್ನು ನಿಗದಿಪಡಿಸಲು ಸಾಧ್ಯವಾಗುತ್ತದೆ.
ವೇತನ ಸಂಹಿತೆ ಮಸೂದೆಯ ಬಗ್ಗೆ ಸಮಿತಿಯ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ, ವರದಿ ಅಂತಿಮವಾಗಿದ್ದು ಶೀಘ್ರವೇ ತಲುಪಿಸುವುದಾಗಿ ಹೇಳಿದ್ದಾರೆ. ಮುಂದಿನ ಅಧಿವೆಶನದಲ್ಲಿ ಮಸೂದೆಯನ್ನು ಅಂಗೀಕರಿಸಲಾಗುವುದು ಎಂದು ಹೇಳಿದ್ದಾರೆ.
2017 ರ ಆಗಸ್ಟ್ ನಲ್ಲಿ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಲಾಗಿತ್ತು. ನಂತರ ಪರಿಶೀಲನೆಗಾಗಿ ಅದನ್ನು ಸಮಿತಿಗೆ ಕಳಿಸಲಾಗಿದ್ದು, ಈ ಕುರಿತ ವರದಿ ಮುಂಗಾರು ಅಧಿವೇಶನದ ವೇಳೆಗೆ ಲಭ್ಯವಾಗಲಿದೆ.