ಸಾಂದರ್ಭಿಕ ಚಿತ್ರ 
ದೇಶ

ರೈಲ್ವೆಯ ರಿವರ್ಸ್ ಹರಾಜಿನಿಂದ ವಾರ್ಷಿಕವಾಗಿ 20,000 ಕೋಟಿ ರೂ ಉಳಿತಾಯ

ಭಾರತೀಯ ರೈಲ್ವೆಗೆ ನಿಗದಿತ ಉಳಿತಾಯದ ಬೆಳವಣಿಗೆಗೆ ಹೆಚ್ಚಿನ ಮೌಲ್ಯ ಸಂಗ್ರಹಣೆಗೆ ವೆಚ್ಚದಲ್ಲಿ ...

ನವದೆಹಲಿ: ಭಾರತೀಯ ರೈಲ್ವೆಗೆ ನಿಗದಿತ ಉಳಿತಾಯದ ಬೆಳವಣಿಗೆಗೆ ಹೆಚ್ಚಿನ ಮೌಲ್ಯ ಸಂಗ್ರಹಣೆಗೆ ವೆಚ್ಚದಲ್ಲಿ ಶೇಕಡಾ 10ರಷ್ಟು ಉಳಿತಾಯ ಮತ್ತು ಸಂಗ್ರಹಣೆಯಲ್ಲಿ ಒಟ್ಟು 20,000 ಕೋಟಿ ರೂಪಾಯಿಗಳಷ್ಟು ಉಳಿತಾಯಕ್ಕೆ ಎಲೆಕ್ಟ್ರಾನಿಕ್ ರಿವರ್ಸ್ ಆಕ್ಷನ್(ಇಆರ್ ಎ) ಪ್ರಕ್ರಿಯೆಯನ್ನು ಜಾರಿಗೆ ತರಲಾಗುವುದು ಎಂದು ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಇಲಾಖೆಯಲ್ಲಿ ಪಾರದರ್ಶಕತೆ ತರಲು, ಸುಗಮ ವ್ಯವಹಾರ ಮತ್ತು ಒಕ್ಕೂಟಗಳಿಂದ ಏಕಸ್ವಾಮ್ಯವನ್ನು ತಡೆಗಟ್ಟಲು ಈ ಹೊಸ ಉಪಕ್ರಮ ರೈಲ್ವೆ ವಲಯದಲ್ಲಿ ನಿಗದಿತ ಉಳಿತಾಯಕ್ಕೆ ಸಹಕಾರಿಯಾಗಲಿದೆ. ಇಂದು ಭಾರತೀಯ ರೈಲ್ವೆಯಲ್ಲಿ ಒಟ್ಟು ವಾರ್ಷಿಕ ವೆಚ್ಚ ಸುಮಾರು 1,50,000 ಕೋಟಿ ರೂಪಾಯಿ ತಗಲುತ್ತದೆ.

ಇದಕ್ಕೆ ಹೆಚ್ಚುವರಿಯಾಗಿ ಭಾರತೀಯ ರೈಲ್ವೆ, ಸಂಗ್ರಹಣೆ, ಪ್ರಯಾಣಿಕರು ಮತ್ತು ವಸ್ತುಗಳು, ಸೇವೆಗಳು ಮತ್ತು ಇತರ ಸುರಕ್ಷತಾ ಸಂಬಂಧಿ ಕೆಲಸಗಳ ಉತ್ಪಾದನೆ ಮತ್ತು ನಿರ್ವಹಣೆಗೆ ವಾರ್ಷಿಕವಾಗಿ ಭಾರತೀಯ ರೈಲ್ವೆ ಹೆಚ್ಚುವರಿಯಾಗಿ ಸುಮಾರು 50,000 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಸಂಗ್ರಹಿಸುತ್ತದೆ.

ವಿದ್ಯುನ್ಮಾನ ವಿರುದ್ಧ ಹರಾಜು ಪ್ರಕ್ರಿಯೆಯಿಂದ ವಸ್ತುಗಳು ಮತ್ತು ಸೇವೆಗಳ ಪೂರೈಕೆ ಸೇರಿದಂತೆ ಅಧಿಕ ಮೌಲ್ಯದ ವಸ್ತುಗಳ ಸಂಗ್ರಹ, ಯೋಜನೆಗಳು ಮತ್ತು ಕೆಲಸಗಳು ಪಾರದರ್ಶಕವಾಗಿ ನಡೆಯುವ ಸಾಧ್ಯತೆಯಿದ್ದು ಸ್ಪರ್ಧಾತ್ಮಕ ಬೆಲೆಯಲ್ಲಿ ಹರಾಜಾಗುವ ನಿರೀಕ್ಷೆಯಿದೆ. ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ವಸ್ತುಗಳು, ಸೇವೆಗಳು ಮತ್ತು ಕೆಲಸಗಳ ಪೂರೈಕೆಯಲ್ಲಿ ಕೂಡ ಕೈಗಾರಿಕೆಗಳು ನಿರತವಾಗಿರುತ್ತದೆ.

ಉದ್ಯಮಗಳ ಸುಗಮಗೊಳಿಸುವಿಕೆಯ ಮತ್ತೊಂದು ಲಾಭವೆಂದರೆ ಮಾನವನ ಮಧ್ಯಪ್ರವೇಶವನ್ನು ಇದು ಹೋಗಲಾಡಿಸಿ ಕಾಗದರಹಿತ ವಹಿವಾಟಿಗೆ ಪ್ರೋತ್ಸಾಹ ನೀಡುತ್ತದೆ. ರೈಲ್ವೆಗಳಿಗೆ ವಸ್ತುಗಳು ಮತ್ತು ಸೇವೆಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ಒದಗಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT