ದೇಶ

ರಾಜಸ್ತಾನ, ಉತ್ತರಪ್ರದೇಶದಲ್ಲಿ ಭಾರೀ ಬಿರುಗಾಳಿ, ಮಳೆಗೆ 100 ಬಲಿ

Vishwanath S
ನವದೆಹಲಿ: ರಾಜಸ್ತಾನ ಹಾಗೂ ಉತ್ತರಪ್ರದೇಶದಲ್ಲಿ ಭಾರೀ ಗಾಳಿ, ಮಳೆ, ಧೂಳಿನ ಚಂಡಮಾರುತಕ್ಕೆ 100ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. 
ಬುಧವಾರ ಸಂಜೆ ಸುರಿದ ಭಾರೀ ಮಳೆ ಹಾಗೂ ಚಂಡಮಾರುತಕ್ಕೆ ಎರೂಡ ರಾಜ್ಯಗಳಲ್ಲಿ ಹಲವು ಮನೆಗಳು ಕುಸಿದಿವೆ. ಅಲ್ಲದೆ ಎರಡು ರಾಜ್ಯಗಳ ಜನತೆಗೆ ಸಾಕಷ್ಟು ತೊಂದರೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 
ಉತ್ತರಪ್ರದೇಶದಲ್ಲಿ ಧೂಳಿನ ಚಂಡಮಾರುತಕ್ಕೆ 64 ಮಂದಿ ಬಲಿಯಾಗಿದ್ದರೆ, 160ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಈ ಪೈಕಿ ಆಗ್ರಾದಲ್ಲಿ ಅತೀ ಹೆಚ್ಚು ಅಂದರೆ ಮಕ್ಕಳು ಸೇರಿ 43 ಮಂದಿ ಮೃತಪಟ್ಟಿದ್ದಾರೆ. 
ರಾಜಸ್ಥಾನಗದ ಆಳ್ವಾರ್, ಭರತ್ ಪುರ್ ಮತ್ತು ದೋಲ್ಪುರ್ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಮಳೆಯ ಆರ್ಭಟಕ್ಕೆ ಈ ವರೆಗೂ ವಿವಿಧ ಪ್ರಕರಣಗಳಲ್ಲಿ 31 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಭಾರಿ ಗಾತ್ರದ ಮರಗಳೂ ಕೂಡ ನೆಲಕ್ಕುರುಳಿವೆ. ಮಳೆಯಿಂದಾಗಿ ರಾಜಸ್ಥಾನದಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ವಿದ್ಯುತ್ ಕಡಿತವಾಗಿದೆ. ರಾಜಧಾನಿ ದೆಹಲಿಯಿಂದ 164 ಕಿ.ಮೀ ದೂರದಲ್ಲಿರುವ ಆಳ್ವಾರ್ ನಲ್ಲೂ ಸಂಪೂರ್ಣ ವಿದ್ಯುತ್ ಕಡಿತವಾಗಿದೆ.
SCROLL FOR NEXT