ಪ್ರಧಾನಿ ಮೋದಿಗೆ ನಗರ ಕಟ್ಟುವುದಕ್ಕಿಂತಲೂ ಸುಳ್ಳುಗಳನ್ನು ಕಟ್ಟುವುದೇ ಸುಲಭ: ರಾಹುಲ್ ಗಾಂಧಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಗರಗಳನ್ನು ಕಟ್ಟುವುದಕ್ಕಿಂತಲೂ ಸುಳ್ಳುಗಳನ್ನು ಕಟ್ಟುವುದು ಸುಲಭ ಎಂದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಹೇಳಿದ್ದಾರೆ...
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಗರಗಳನ್ನು ಕಟ್ಟುವುದಕ್ಕಿಂತಲೂ ಸುಳ್ಳುಗಳನ್ನು ಕಟ್ಟುವುದು ಸುಲಭ ಎಂದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಹೇಳಿದ್ದಾರೆ.
ಪ್ರಧಾನಿ ಮೋದಿಯವರ ವಿರುದ್ದ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿಯವರು, ಗಾರ್ಡನ್ ಸಿಟಿ ಎಂಬ ಹೆಮ್ಮೆಯ ನಗರವಾಗಿರುವ ಬೆಂಗಳೂರನ್ನು ಗಾರ್'ಬೇಜ್ ಸಿಟಿ ಎಂದು ಕರೆದಿರುವುದು ಅವಮಾನಕರ ವಿಚಾರ. ಸುಳ್ಳುಗಳು ಕಟ್ಟುವುದು ನಿಮಗೆ ಸರಾಗವಾಗಿ ಬರುತ್ತಾದೆ, ಆದರೆ, ನಗರಗಳನ್ನು ಕಟ್ಟುವುದು ನಿಮಗೆ ಕಷ್ಟಕರ. ಸತ್ಯಾಂಶಗಳು ನೀವು ಕಟ್ಟುವ ಸುಳ್ಳುಗಳನ್ನು ಅನಾವರಣ ಮಾಡುತ್ತಿವೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ನಗರದಲ್ಲಿ ಬಿಜೆಪಿ ನಡೆಸಿದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿಯವರು ಕಂಪ್ಯೂಟರ್ ಕ್ಯಾಪಿಟಲ್ ಆಗಿದ್ದ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಕ್ರೈಮ್ ಕ್ಯಾಪಿಟಲ್ ಆಗಿ ಪರಿವರ್ತಿಸಿದೆ. ಸಿಲಿಕಾನ್ ಸಿಟಿ ಎನಿಸಿಕೊಂಡಿದ್ದ ಬೆಂಗಳೂರನ್ನು ಸಿನ್ ವ್ಯಾಲಿಯನ್ನಾಗಿ ಮಾಡಿದೆ ಎಂದು ಹೇಳಿದ್ದರು.
ಮೋದಿಯವರ ಈ ಹೇಳಿಕೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಪ್ರಧಾನಿ ಮೋದಿಯವರೇ ಕರ್ನಾಟಕ ಮತ್ತು ಬೆಂಗಳೂರಿನ ಮಾನ ಮರ್ಯಾದೆಯನ್ನು ಈ ರೀತಿಯಾಗಿ ಕಳೆದಿರುವುದು ನಿಜಕ್ಕು ನಿಮಗೇ ಅವಮಾನಕರ ಎಂದಿದ್ದಾರೆ.