ಶ್ರೀನಗರ: ಶೋಪಿಯಾನ್ ನ ಬದ್ಗಾಮ್ ನಲ್ಲಿ ಭಾರತೀಯ ಯೋಧರು ಕಾಶ್ಮೀರ ಯೂನಿರ್ವಸಿಟಿಯ ಓರ್ವ ಪ್ರೊಫೆಸರ್ ಸಹಿತ ಐವರು ಉಗ್ರರನ್ನು ಹೊಡೆದುರುಳಿಸಿತ್ತು. ಎನ್‌ಕೌಂಟರ್ ಬಳಿಕ ಭದ್ರತಾ ಪಡೆಗಳು ಮತ್ತು ಪ್ರತಿಭಟನಕಾರರ ನಡುವೆ ನಡೆದ ಕಲಹದಲ್ಲಿ ಐವರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.
ಬದಿಗಾಮ್ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿರುವುದಾಗಿ ಖಚಿತ ಮಾಹಿತಿ ದೊರಕಿದ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರೆದು, ಕಾರ್ಯಾಚರಣೆ ಆರಂಭಿಸಿದ್ದವು. ಕಾರ್ಯಾಚರಣೆಯಲ್ಲಿ ಐವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿತ್ತು. ಆ ಬಳಿಕ ಪ್ರತಿಭಟನಾಕಾರರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಕಳೆದ 8 ವರ್ಷಗಳಿಂಗ ಅಹ್ಮದ್ ತಕ್ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಲಷ್ಕರ್ ಇ ತೊಯ್ಬಾ ಕಮಾಂಡರ್ ಗಳಾದ ಅಬು ದುಜಾನ, ಖ್ವಾಸಿಂ ಹಾಗೂ ಅಬು ರೆಹಮಾನ್ ಜೊತೆ ಅಹ್ಮದ್ ತಕ್ ನಿಕಟ ಸಂಪರ್ಕವನ್ನು ಹೊಂದಿದ್ದನೆಂದು ಹೇಳಲಾಗಿದೆ.