ದೇವಸ್ಥಾನದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ಇಶಾ ಅಂಬಾನಿ-ಆನಂದ್ ಪಿರಾಮಲ್ ಜೋಡಿ 
ದೇಶ

ಆನಂದ್ ಪಿರಾಮಲ್ ಜೊತೆ ಮುಕೇಶ್ ಅಂಬಾನಿ ಪುತ್ರಿ ಇಶಾ ನಿಶ್ಚಿತಾರ್ಥ

ರಿಲಯನ್ಸ್ ಇಂಡಸ್ಟ್ರೀಸ್ ಉದ್ಯಮಿ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿಯವರ ಏಕೈಕ ಪುತ್ರಿ ಇಶಾ ...

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಉದ್ಯಮಿ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿಯವರ ಏಕೈಕ ಪುತ್ರಿ ಇಶಾ ಅಂಬಾನಿ ಪಿರಾಮಲ್ ಸಮೂಹದ ಮುಖ್ಯಸ್ಥ ಅಜಯ್ ಪಿರಾಮಲ್ ಪುತ್ರ ಆನಂದ್ ಪಿರಾಮಲ್ ಜತೆ ಈ ವರ್ಷಾಂತ್ಯದಲ್ಲಿ ಸಪ್ತಪದಿ ತುಳಿಯಲಿದ್ದಾರೆ.

ಮಹಾಬಲೇಶ್ವರ ದೇಗುಲದಲ್ಲಿ ಕಳೆದ ಭಾನುವಾರ ನಡೆದ ಸರಳ ನಿಶ್ಚಿತಾರ್ಥ ಸಮಾರಂಭದಲ್ಲಿ ಆನಂದ್ ಮತ್ತು ಇಶಾ ಉಂಗುರ ಬದಲಾಯಿಸಿಕೊಂಡರು.ಮುಖೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಮತ್ತು ಅನಂತ್ ಅಂಬಾನಿ, ಆನಂದ್ ಪಿರಾಮಲ್ ಕುಟುಂಬ ವರ್ಗದವರು ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಹಾರ್ವರ್ಡ್ ಬಿಜಿನೆಸ್ ಸ್ಕೂಲ್​ನಲ್ಲಿ ಪದವಿ ಪಡೆದಿರುವ ಆನಂದ್ ಪಿರಾಮಲ್ ಇಸ್ವಾಸ್ಥ್ಯ ಮತ್ತು ಪಿರಾಮಲ್ ರಿಯಾಲಿಟಿ ಎಂಬ ಎರಡು ನವೋದ್ಯಮಗಳನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ.

ಈ ಎರಡೂ ಸಂಸ್ಥೆಗಳು ಈಗ ಅವರ ಕುಟುಂಬದ 28,064.61 ಕೋಟಿ ರೂ. ವಹಿವಾಟು ಹೊಂದಿರುವ ಪಿರಾಮಲ್ ಎಂಟರ್ ಪ್ರೈಸಸ್ ನ ಭಾಗವಾಗಿವೆ. ಈ ಸಂಸ್ಥೆ ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ 40 ಸಾವಿರ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸುತ್ತಿದೆ. ತಂದೆ ಅಜಯ್ ಪಿರಮಾಳ್  ವಿವಿಧ ಸಂಸ್ಥೆಗಳನ್ನು ಹೊಂದಿರುವ ಪಿರಾಮಲ್ ಸಮೂಹ ಸಂಸ್ಥೆಯ ಅಧ್ಯಕ್ಷರು. ಆನಂದ್ ಇದರ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ.

ಮನಶಾಸ್ತ್ರದ ಪದವೀಧರೆಯಾಗಿರುವ ಇಶಾ, ಯೇಲ್ ವಿಶ್ವವಿದ್ಯಾಲಯದಲ್ಲಿ ಸೌತ್ ಏಷ್ಯನ್ ಸ್ಟಡೀಸ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಸದ್ಯ ಅವರು ಸ್ಟಾನ್​ಫೋರ್ಡ್​ನ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಬಿಜಿನೆಸ್​ನಲ್ಲಿ ವಾಣಿಜ್ಯ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ರಿಲಯನ್ಸ್ ಜಿಯೋ ಮತ್ತು ರಿಲಯನ್ಸ್ ರಿಟೇಲ್​ನ ನಿರ್ದೇಶಕ ಮಂಡಳಿಯ ಸದಸ್ಯರಾಗಿದ್ದಾರೆ.


ಒಂದು ತಿಂಗಳ ಹಿಂದೆ ಮುಖೇಶ್ ಅಂಬಾನಿಯವರ ಜೇಷ್ಠ ಪುತ್ರ  ಆಕಾಶ್ ಅಂಬಾನಿಯ ನಿಶ್ಚಿತಾರ್ಥ ಶ್ಲೋಕಾ ಮೆಹ್ತಾರೊಂದಿಗೆ ನೆರವೇರಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel