ಲಿಂಗಾಂತರಿಗಳು ಪ್ಯಾನ್ ಕಾರ್ಡ್ ಗಾಗಿ ಲಿಂಗ ಸಂಬಂಧಿ ದಾಖಲೆ ನಿಡಬೇಕಿಲ್ಲ: ಐಟಿ ಇಲಾಖೆ
ನವದೆಹಲಿ: ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಬೇಕಾದ ಲಿಂಗಾಂತರಿಗಳು ತಾವು ಪುರುಷ/ಮಹಿಳೆ ಎನ್ನುವ ಯಾವ ಲಿಂಗಆಧಾರಿತ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಬೇಕಾದ ಲಿಂಗಾಂತರಿಗಳು ಅಥವಾ ಈಗಿರುವ ಪ್ಯಾನ್ ಅನ್ನು ಆ ವರ್ಗಕ್ಕೆ ಬದಲಿಸಿಕೊಳ್ಳಲು ಬಯಸುವವರಿಗೆ ತಮ್ಮ ಲಿಂಗಕ್ಕೆ ಸಂಬಂಧಿಸಿ ಯಾವ ದಾಖಲೆ ಸಲ್ಲಿಸುವ ಅಗತ್ಯವಿಲ್ಲ. ತೆರಿಗೆ ವ್ಯವಹಾರಕ್ಕಾಗಿ ಪ್ಯಾನ್ ಕಾರ್ಡ್ ಬಳಸಲಿಚ್ಚಿಸುವ ಲಿಂಗಾಂತರಿಗಳಿಗಿನ್ನು ಸ್ವತಂತ್ರ ವರ್ಗ ಎಂದು ಪರಿಗಣಿಸುವುದಾಗಿ ಇಲಾಖೆ ಹೇಳಿದೆ.
ಈ ಸಂಬಂಧ ತೆರಿಗೆ ಇಲಾಖೆಯು ಕಳೆದ ಎಪ್ರಿಲ್ 10ರಂದು ಐಟಿ ನಿಯಮಾವಳಿಗಳಿಗೆ ತಿದ್ದುಪಡಿ ತಂದಿದೆ.. ಈ ಮುನ್ನ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಆಯಾ ವರ್ಗದ ಪ್ಯಾನ್ ಕಾರ್ಡ್ ಪಡೆಯುವ ಅವಕಾಶವಿತ್ತು.
ಲಿಂಗಾಂತರಿಗಳು ಪ್ಯಾನ್ ಕಾರ್ಡ್ ಹೊಂದುವಲ್ಲಿ ಎದುರಾಗುವ ಸಮಸ್ಯೆ, ತಾವು ಇದಾಗಲೇ ಹೊಂದಿರುವ ಪ್ಯಾನ್ ಕಾರ್ಡ್ ಬಳಸಿ ವ್ಯವಹಾರದಲ್ಲಿ ತೊಡಗಿದಾಗ ಉಂಟಾಗುವ ಸಮಸ್ಯೆ ಬಗ್ಗೆ ಲಿಂಗಾಂತರಿಗಳೇ ಐಟಿ ಇಲಾಖೆಗೆ ವಿವರವಾದ ಮನವಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ಐಟಿ ಇಲಾಖೆಯು ಇಂತಹವರಿಗಾಗಿ ಸ್ವತಂತ್ರ ವರ್ಗ ರೂಪಿಸಿ ಕಾರ್ಡ್ ವಿತರಣೆಗೆ ಅವಕಾಶ ಕಲ್ಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics