ದೇಶ

ಕೇರಳದಲ್ಲಿ ಮೊದಲ ಲಿಂಗಪರಿವರ್ತಿತರ ಮದುವೆ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೂರ್ಯ, ಇಶಾನ್

Lingaraj Badiger
ತಿರುವನಂತಪುರಂ: ಲಿಂಗಪರಿವರ್ತಿತರಾದ ಸೂರ್ಯ ಮತ್ತು ಇಶಾನ್ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಕೇರಳದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಈ ಮೂಲಕ ರಾಜ್ಯದ ಇತಿಹಾಸದಲ್ಲೇ ಮೊದಲ ಲಿಂಗಪರಿವರ್ತಿತ ದಂಪತಿ ಎಂಬ ಹೊಸ ದಾಖಲೆ ಬರೆದಿದ್ದಾರೆ.
ಹೆಣ್ಣಾಗಿ ಜನಿಸಿದ್ದ 33 ವರ್ಷದ ಇಶಾನ್ 2014ರಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿ ಕೊಂಡು ಗಂಡಾಗಿ ಬದಲಾಗಿದ್ದರು. ಇನ್ನು 31 ವರ್ಷದ ಸೂರ್ಯ ಸಹ ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣಾಗಿ ಬದಲಾಗಿದ್ದರು. ಈ ಇಬ್ಬರೂ ಇಂದು ತಿರುವನಂತಪುರಂನ ಮನ್ನಂ ಕ್ಲಬ್ ನಲ್ಲಿ ವಿಶೇಷ ಮದುವೆ ಕಾಯ್ದೆ ಅಡಿ ಮದುವೆಯಾದರು. ಈ ಕ್ಷಣಕ್ಕೆ ನೂರಾರು ಲಿಂಗಪರಿವರ್ತಿತರು ಸಾಕ್ಷಿಯಾದರು.
ಒಂದು ಸಮಯದಲ್ಲಿ ಅವನು ಅವಳಾಗಿಯೂ, ಅವಳು ಅವನಾಗಿ ಇದ್ದ ಇಶಾನ್ ಮತ್ತು ಸೂರ್ಯ ಈಗ ಮದುವೆಯಾಗುವ ಮೂಲಕ ಸಮಾಜದಲ್ಲಿ ಲಿಂಗ ಪರಿವರ್ತಿತರ ಬಗ್ಗೆ ಇರುವ ಪೂರ್ವಗ್ರಹಗಳನ್ನು ತೊಡೆದುಹಾಕಲು ಮುಂದಾಗಿದ್ದಾರೆ.
ಟೀವಿ ನಟರಾಗಿ ಹೆಸರು ಮಾಡುತ್ತಿರುವ ಸೂರ್ಯ ಪಟ್ಟೂರಿನ ವಿಜಕುಮಾರ್ ಅವರ ಪುತ್ರಿಯಾಗಿದ್ದು, ಇಶಾನ್ ವಲ್ಲಕಡುವಿನ ಮೊಹಮ್ಮದ್ ಕಬೀರ್ ಅವರ ಪುತ್ರ. ಲಿಂಗಪರಿವರ್ತನೆ ಮಾಡಿಕೊಂಡ ನಂತರ ಇವರಿಬ್ಬರೂ ತಮ್ಮ ತಮ್ಮ ಕುಟುಂಬದಿಂದ ದೂರಾಗಿದ್ದರು. 
SCROLL FOR NEXT