ದೇಶ

ಸೋಲಾರ್ ಹಗರಣದಿಂದ ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಮುಕ್ತಿ

Sumana Upadhyaya

ಕೊಚ್ಚಿ: ಸೋಲಾರ್ ಹಗರಣದಲ್ಲಿ ಕೇರಳ ಹೈಕೋರ್ಟ್ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಗೆ ಮುಕ್ತಿ ನೀಡಿದೆ.

ಉಮ್ಮನ್ ಚಾಂಡಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಸೌರ ತನಿಖೆ ಆಯೋಗ ನಡೆಸಿರುವ ವಿಚಾರಣೆಗಳು ಮತ್ತು ಹೇಳಿಕೆಗಳನ್ನು ಕೇರಳ ಹೈಕೋರ್ಟ್ ಇಂದು ವಜಾ ಮಾಡಿದೆ.

ಸೌರ ತನಿಖೆ ಆಯೋಗದ ವರದಿಯನ್ನು ಅಸಿಂಧುಗೊಳಿಸುವಂತೆ ಉಮ್ಮನ್ ಚಾಂಡಿಯವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿ ನ್ಯಾಯಾಲಯ ಈ ಆದೇಶ ನೀಡಿದೆ. ಆದರೆ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಮಾಜಿ ಸಚಿವ ತಿರುವಂಚೂರು ರಾಧಾಕೃಷ್ಣನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು.

2013ರ ಜುಲೈ 19ರಂದು ಸರಿತಾ ನಾಯರ್ ಬರೆದ ಪತ್ರಕ್ಕೆ ಮಾಡಿರುವ ಉಲ್ಲೇಖಗಳು, ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಮರು ಹೇಳಿಕೆಗಳು, ಅವಲೋಕನಗಳು, ಸಲಹೆ ಮತ್ತು ಶಿಫಾರಸ್ಸುಗಳನ್ನು ನೋಡಿದಾಗ ಆಯೋಗದ ವರದಿಯನ್ನು ತಿರಸ್ಕರಿಸಬಹುದು ಎಂದು ತಿಳಿದುಬಂದಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಇಂದು ಹೇಳಿದೆ.

ಈ ಆದೇಶದ ಮೂಲಕ ರಾಜ್ಯ ಸರ್ಕಾರ ಸರಿತಾ ನಾಯರ್ ಅವರ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ ಉಮ್ಮನ್ ಚಾಂಡಿ ವಿರುದ್ಧ ಮೇಲಿನ ನ್ಯಾಯಾಲಯಕ್ಕೆ ದೂರು ನೀಡಲು ಸಾಧ್ಯವಿಲ್ಲದಾಗಿದೆ.

SCROLL FOR NEXT