ದೇಶ

ದೇಶದಲ್ಲಿನ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಬಿಜೆಪಿ, ಆರ್ ಎಸ್ ಎಸ್ ಅಧೀನ- ರಾಹುಲ್ ಗಾಂಧಿ

Nagaraja AB

ರಾಯಪುರ : ಬಿಜೆಪಿ ನೇತೃತ್ವದ ಕೇಂದ್ರಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ದೇಶದಲ್ಲಿನ ಎಲ್ಲಾ   ಸಾಂವಿಧಾನಿಕ ಸಂಸ್ಥೆಗಳು ಕೇಂದ್ರದ ಅಧೀನಕ್ಕೊಳಪಟ್ಟಿದ್ದು, ದೇಶದಲ್ಲಿ ಭಯದ ವಾತವಾರಣ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.

ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಬೆಳ್ಳಿ ಮಹೋತ್ಸವ ಅಂಗವಾಗಿ ಸ್ಥಳೀಯ ಆಡಳಿತ ಆಯೋಜಿಸಿದ್ದ ಜನ್ ಸ್ವರಾಜ್ ಸಮ್ಮೇಳನ  ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್ ಎಸ್ ಸ್  ದೇಶದಲ್ಲಿನ ಎಲ್ಲಾ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಆಕ್ರಮಣ ಮಾಡಿಕೊಂಡಿವೆ ಎಂದು ಆರೋಪಿಸಿದರು.

 ದೇಶದಲ್ಲಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ಭೀತಿ ಆವರಿಸಿದೆ. ಮಾಧ್ಯಮ ಕ್ಷೇತ್ರದಲ್ಲೂ ಭಯದ ವಾತವಾರಣವಿದೆ.  ಪ್ರಧಾನಿ ನರೇಂದ್ರಮೋದಿ ಎದುರು ನಿಂತು ಯಾವುದೇ ಸಂಸದ ಮಾತನಾಡದ ಪರಿಸ್ಥಿತಿ  ಸೃಷ್ಟಿಯಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದರು.

ಕರ್ನಾಟಕದಲ್ಲಿ ಶಾಸಕರು ಒಂದು ಕಡೆಯಾದರೆ, ರಾಜ್ಯಪಾಲರು ಮತ್ತೊಂದು ಕಡೆ ಹೀಗೆ ದೇಶದಲ್ಲಿನ ಎಲ್ಲಾ ಪ್ರಜಾಪ್ರಭುತ್ವ ಸಂಸ್ಥೆಗಳು, ಸಂಸದರು, ಶಾಸಕರು, ಮಾಧ್ಯಮ, ಯೋಜನಾ ಆಯೋಗ ಎಲ್ಲಾದರಲ್ಲೂ ಜನರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಆರ್ ಎಸ್ ಎಸ್ ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.



SCROLL FOR NEXT