ವೀಸಾಗಾಗಿ ಲಂಚ: ಗೃಹ ಸಚಿವಾಲಯದ ಅಧಿಕಾರಿ, ಸೇರಿ ನಾಲ್ವರ ಬಂಧನ 
ದೇಶ

ವೀಸಾಗಾಗಿ ಲಂಚ: ಗೃಹ ಸಚಿವಾಲಯದ ಅಧಿಕಾರಿ, ಸೇರಿ ನಾಲ್ವರ ಬಂಧನ

ಪಾಕಿಸ್ತಾನಿ ವಲಸಿಗರಿಗೆ ದೀರ್ಘಾವಧಿಯ ವೀಸಾ ನೀಡುವ ಪ್ರಕ್ರಿಯೆ ಸಂಬಂಧ ಸಂಪೂರ್ಣ ಆಂತರಿಕ ತನಿಖೆ ನಡೆಸುವಂತೆ ಗೃಹ ಸಚಿವಾಲಯ ಆದೇಶಿಸಿದೆ.

ನವದೆಹಲಿ: ಪಾಕಿಸ್ತಾನಿ ವಲಸಿಗರಿಗೆ ದೀರ್ಘಾವಧಿಯ ವೀಸಾ ನೀಡುವ ಪ್ರಕ್ರಿಯೆ ಸಂಬಂಧ ಸಂಪೂರ್ಣ ಆಂತರಿಕ ತನಿಖೆ ನಡೆಸುವಂತೆ ಗೃಹ ಸಚಿವಾಲಯ ಆದೇಶಿಸಿದೆ. ವೀಸಾ ಪಡೆಯುವದಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಂದ ಲಂಚ ಸ್ವೀಕರಿಸಿದ ಆರೋಪದ ಮೇಲೆ ಸಚಿವಾಲಯದ ಅಧಿಕಾರಿಯೊಬ್ಬರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.
ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಅಥವಾ ದೀರ್ಘಕಾಲೀನ ವೀಸಾಗಾಗಿ ಅರ್ಜಿ ಸಲ್ಲಿಸಿರುವ ಅರ್ಜಿದಾರರ ಬಾಕಿ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿಅಲು ಸಚಿವಾಲಯ ಆದೇಶಿಸಿದೆ.
ಪಾಕಿಸ್ತಾನಿ ವಲಸಿಗರಿಂದ ಲಂಚ ಸ್ವೀಕರಿಸಿದ ಇಲಾಖೆಯ ಅಧಿಕಾರಿಯನ್ನು ಬಂಧ್ಸಿಸಿದ್ದು ಇದೀಗ ಆಂತರಿಕ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗೃಹ ಸಚಿವಾಲಯದ ವಿದೇಶಿ ವಿಭಾಗದ ಹಿರಿಯ ಸಹಾಯಕ ಪಿ.ಕೆ. ಮಿಶ್ರಾ ಹಾಗೂ ಇತರ್ರೆ ಮೂವರನ್ನು ರಾಜಸ್ಥಾನ್ ಭ್ರಷ್ಠಾಚಾರ ನಿಗ್ರಹ ದಳ ಬಂಧಿಸಿದೆ. ಪಾಕಿಸ್ತಾನಿ ವಲಸಿಗರಿಂದ ಲಂಚ ಸ್ವೀಕರಿಸಿದ್ದ ಆರೋಪದ ಮೇಲೆ ಈ ಬಂಧನವಾಗಿದೆ.
ಸಧ್ಯ ’ವೀಶಾಗಾಗಿ ಲಂಚ’ ಪ್ರಕರಣದಲ್ಲಿ ಸಚಿವಾಲಯವು ರಾಜಸ್ಥಾನ ಪೋಲೀಸರ ವರದಿಗಾಗಿ ಕಾಯುತ್ತಿದೆ ಎಂದು ಇನ್ನೋರ್ವ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ಇಂತಹಾ ಲಂಚ ಸ್ವೀಕಾರ ಕೃತ್ಯನಡೆಯುತ್ತಲಿದೆ.ಎಂದು ರಾಜಸ್ಥಾನ ಪೋಲೀಸರು ಹೇಳಿದ್ದಾರೆ.
ಪ್ರಕರಣ ಸಂಬಂಧ ಅಶೋಕ್, ಗೋವಿಂದ ಮತ್ತು ಭಗವಾನ್ ರಾಮ್ ಎನ್ನುವ ಇತರೆ ಮೂವರು ಪಾಕಿಸ್ತಾನಿ ವಲಸಿಗರನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!