ರಾಹುಲ್ ಗಾಂಧಿ ಭೇಟಿಯಾದ ಕುಮಾರಸ್ವಾಮಿ
ನವದೆಹಲಿ: ರಾಹುಲ್ ಗಾಂಧಿ ಕರ್ನಾಟಕದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ. ವೇಣುಗೋಪಾಲ್ ಗೆ ಸರ್ಕಾರ ರಚನೆ ಸಂಬಂಧ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಅಂತಿಮಗೊಳಿಸಲು ಅನುಮತಿ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವರದಿಗಾರರೊಂದಿಗೆ ಮಾತನಾಡಿದ್ದಾರೆ.
"ನಾಳೆ ರಾಹುಲ್ ಗಾಂಧಿ ಹಾಗೂ ಸ್ಥಳೀಯ ಮುಖಂಡರು ಒಟ್ಟಿಗೇ ಕುಳಿತು ಎಲ್ಲಾ ವಿಚಾರಗಳನ್ನು ಅಂತಿಮಗೊಳಿಸುವವರಿದ್ದಾರೆ" ಉಪಮುಖ್ಯಮಂತ್ರಿ ಯಾರೆನ್ನುವ ಪ್ರಶ್ನೆಗೆ ಕುಮಾರಸ್ವಾಮಿ ಉತ್ತರಿಸಿದ್ದಾರೆ.
"ಗಾಂಧಿ ಕುಟುಂಬಕ್ಕೆ ನನ್ನ ಗೌರವ, ನಿಷ್ಠೆಯನ್ನು ತೋರಿಸುವ ಸಲುವಾಗಿ ನಾನು ಇಲ್ಲಿಗೆ ಆಗಮಿಸಿದ್ದೇನೆ. ನಾನು ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಅವರಿಬ್ಬರೂ (ಸೋನಿಯಾ ಹಾಗೂ ರಾಹುಲ್) ಆಗಮಿಸಲು ಒಪ್ಪಿದ್ದಾರೆ" ಕುಮಾರಸ್ವಾಮಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics