ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮೋದಿ ಸರ್ಕಾರಕ್ಕೆ 4 ವರ್ಷ: ರಾಹುಲ್ ಗಾಂಧಿ ನೀಡಿದ ರಿಪೋರ್ಟ್ ಕಾರ್ಡ್ ಹೀಗಿದೆ ನೋಡಿ!

ಮೋದಿ ಅವರ ಸರ್ಕಾರ ಕೃಷಿ, ವಿದೇಶಾಂಗ ನೀತಿ ಸೇರಿ ಅನೇಕ ಕ್ಷೇತ್ರಗಳಲ್ಲಿ ವಿಫಲವಾಗಿದೆ, ಆದರೆ ತನ್ನನ್ನು ತಾನು ಹೊಗಳಿಕೊಂಡು ಪ್ರಚಾರ ಪಡೆಯುವುದರಲ್ಲಿ ಮಾತ್ರ........

ರಾಹುಲ್ ಗಾಂಧಿ
Raghavendra Adiga
Updated On : 26 May 2018, 5:30 am
ನವದೆಹಲಿ: ಮೋದಿ ಅವರ ಸರ್ಕಾರ ಕೃಷಿ, ವಿದೇಶಾಂಗ ನೀತಿ ಸೇರಿ ಅನೇಕ ಕ್ಷೇತ್ರಗಳಲ್ಲಿ ವಿಫಲವಾಗಿದೆ, ಆದರೆ ತನ್ನನ್ನು ತಾನು ಹೊಗಳಿಕೊಂಡು ಪ್ರಚಾರ ಪಡೆಯುವುದರಲ್ಲಿ ಮಾತ್ರ ಉತ್ತಮವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮೋದಿ ನಾಯಕತ್ವದ ಕೇಂದ್ರ ಸರ್ಕಾರ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಗಾಂಧಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ’ರಿಪೋರ್ಟ್ ಕಾರ್ಡ್’ನ್ನು ಟ್ವೀಟ್ ಮಾಡಿದರು
ಕೃಷಿ, ವಿದೇಶಾಂಗ ನೀತಿ,  ಇಂಧನ ಬೆಲೆಗಳು ಮತ್ತು ಉದ್ಯೋಗ ಸೃಷ್ಟಿಗಳಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.

Advertisement

Advertisement

ಆದರೆ ಸರ್ಕಾರ ಘೋಷಣೆಗಳು ಹಾಗೂ ಸ್ವಯಂ ಪ್ರಚಾರ ಕಾರ್ಯಗಳಲ್ಲಿ ಉತ್ತಮ ಸಾಧನೆ ತೋರಿರುವುದಾಗಿ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವನ್ನು ಮಾಸ್ಟರ್ ಕಮ್ಯುನಿಕೇಟರ್ ಎಂದು ಜರಿದ ರಾಹುಲ್ ಸಂಕೀರ್ಣ ಸಮಸ್ಯೆಗಳ ಸೃಷ್ಟಿ ಮಾಡುವ ಸರ್ಕಾರಕ್ಕೆ ಸಣ್ಣ ಸಣ್ಣ ವಿಚಾರಗಲತ್ತ ಗಮನವಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement