ಗೋವಾ: ಗೆಳೆಯನ ಜತೆಗಿದ್ದ ಯುವತಿಯ ಮೇಲೆರಗಿದ ಕಾಮುಕರು, ಮೂವರ ಬಂಧನ
ಪಣಜಿ: ಶುಕ್ರವಾರ ಗೋವಾದ ಪ್ರಖ್ಯಾತ ಕೋಲ್ವಾ ಬೀಚ್ ನಡೆದಿದ್ದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿ ಮೂವರು ಆರೊಪಿಗಳನ್ನು ಬಂಧಿಸಲಾಗಿದೆ. ಇದೇ ವೇಳೆ ಗೋವಾ ಸಚಿವರು ಗೋವಾಗೆ ಆಗಮಿಸುವ ಪ್ರವಾಸಿಗರ ನೈತಿಕ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ್ದಾರೆ.
ಮಧ್ಯಪ್ರದೇಶ ಇಂದೋರ್ ಮೂಲದ ಮೂವರು ಪ್ರವಾಸಿಗರು ಶುಕ್ರವಾರ ತಡರಾತ್ರಿ ಗೋವಾದ ಬೀಚ್ ನಲ್ಲಿ 20ರ ತರುಣಿ ಮೇಲೆ ಅತ್ಯಾಚಾರ ನಡೆಸಿದ್ದರು. ಸಂತ್ರಸ್ತ ಯುವತಿ ತನ್ನ 22 ವರ್ಷದ ಗೆಳೆಯನೊಂದಿಗೆ ಕೋಲ್ವಾ ಬೀಚ್ ಗೆ ಆಗಮಿಸಿದ್ದಾಗ ಈ ಘಟನೆ ನಡೆದಿತ್ತು.
"ಎಲ್ಲಾ ಮೂವರು ಆರೋಪಿಗಳ ಬಂಧನವಾಗಿದ್ದು ಅವರಲ್ಲಿ ಇಂದೋರ್ ನವರಾದ ಸಂಜೀವ್ ಧನಂಜಯ್ ಪಾಲ್ (23) ಮತ್ತು ರಾಮ್ ಸಂತೋಷ್ ಭರಿಯಾ (19) ಅವರುಗಳನ್ನು ಶನಿವಾರ ಬೆಳಿಗ್ಗೆ ಬಂಧಿಸಲಾಗಿದೆ .ಇನ್ನು ಮೂರನೇ ಆರೋಪಿ ಇಂದೋರ್ ನ ವಿಶ್ವಾಸ್ ಮಕ್ರಾನಾ (24) ಅವನನ್ನು ಸಹ ದಕ್ಷಿಣ ಗೋವಾದ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಗಾವಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂತ್ರಸ್ತೆಯು ಸಮೀಪದ ಹಳ್ಳಿಯ ನಿವಾಸಿಯಾಗಿದ್ದು ಆಪಾದಿತರು ಆಕೆಯ ಮೇಲೆರಗಿದ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ವೈದ್ಯಕೀಯ ವರದಿ ಸಹ ಯುವತಿಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಖಚಿತಪಡಿಸಿದೆ ಎಂದು ಪೋಲೀಸರು ತಿಳ್ಖಿಸಿದರು. ಘಟನೆ ಕುರಿತಂತೆ ಕೋಲ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.