ದೇಶ

ರಾಜಕೀಯ ಪಕ್ಷಗಳು ಆರ್ ಟಿಐ ವ್ಯಾಪ್ತಿಗೆ ಬರುವುದಿಲ್ಲ: ಕೇಂದ್ರ ಮಾಹಿತಿ ಆಯೋಗದ ನಿರ್ದೇಶನಕ್ಕೆ ಚುನಾವಣಾ ಆಯೋಗ ವಿರೋಧ

Lingaraj Badiger
ನವದೆಹಲಿ: ಆರು ರಾಷ್ಟ್ರೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ತರಬೇಕು ಎಂದು ಕೇಂದ್ರ ಮಾಹಿತಿ ಆಯೋಗದ ನಿರ್ದೇಶನಕ್ಕೆ ಚುನಾವಣಾ ಆಯೋಗ ವಿರೋಧ ವ್ಯಕ್ತಪಡಿಸಿದ್ದು, ರಾಜಕೀಯ ಪಕ್ಷಗಳು ಆರ್ ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದೆ.
ಕೇಂದ್ರ ಮಾಹಿತಿ ಆಯೋಗ ಜೂನ್ 2013ರಲ್ಲಿ ಆರು ರಾಜಕೀಯ ಪಕ್ಷಗಳನ್ನು ಆರ್ ಟಿಐ ವ್ಯಾಪ್ತಿಗೆ ಸೇರಿಸಿ ತೀರ್ಪು ನೀಡಿತ್ತು. ಇದರ ಅನ್ವಯ ರಾಷ್ಟ್ರೀಯ ಪಕ್ಷಗಳು ಸಂಗ್ರಹಿಸಿದ ದೇಣಿಗೆ ವಿವರ ಕೋರಿ ಸಲ್ಲಿಸಲಾಗಿದ್ದ ಆರ್ ಟಿಐ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ವಿವಾದಾತ್ಮಕ ಹೇಳಿಕೆ ನೀಡಿದೆ.
'ನೀವು ಕೇಳಿದ ಅಗತ್ಯ ಮಾಹಿತಿ ಚುನಾವಣಾ ಆಯೋಗದಲ್ಲಿ ಲಭ್ಯವಿಲ್ಲ. ಇದು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ್ದು ಮತ್ತು ಅವು ಆರ್ ಟಿಐ ವ್ಯಾಪ್ತಿಗೆ ಬರುವುದಿಲ್ಲ' ಎಂದು ಚುನಾವಣಾ ಆಯೋಗ ಉತ್ತರಿಸಿದೆ.
ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ, ಎನ್ ಸಿಪಿ, ಸಿಪಿಐ, ಎಸ್ಪಿ ಮತ್ತು ಸಿಪಿಎಂ ಸಂಗ್ರಹಿಸಿದ್ದ ದೇಣಿಗೆಯ ವಿವರ ನೀಡವಂತೆ ಕೋರಿ ಪುಣೆ ಮೂಲದ ವಿಹಾರ್ ಧೃವೆ ಅವರು ಆರ್ ಟಿಐ ಅರ್ಜಿ ಸಲ್ಲಿಸಿದ್ದರು.
SCROLL FOR NEXT