ನವದೆಹಲಿ: ಭಾರತವನ್ನು ಪ್ರಮುಖ ವಾಯುಯಾನ ಮತ್ತು ರಕ್ಷಣಾ ಶಕ್ತಿಯನ್ನಾಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು 2027 ರ ವೇಳೆಗೆ ಭಾರತದ ರಕ್ಷಣಾ ಬಜೆಟ್ ನ ಗಾತ್ರ 112 ಬಿಲಿಯನ್ ಡಾಲರ್ ನಷ್ಟಾಗಲಿದೆ ಎಂದು ಅಸೋಚಾಮ್ ಹಾಗೂ ಕೆಪಿಎಂಜಿ ಜಂಟಿ ಅಧ್ಯಯನ ವರದಿ ತಿಳಿಸಿದೆ.
2018-19 ರ ಅವಧಿಗೆ ಭಾರತದ ಒಟ್ಟಾರೆ ಬಜೆಟ್ ನ ಗಾತ್ರ 45 ಬಿಲಿಯನ್ ಡಾಲರ್ ನಷ್ಟಿದ್ದು ಇದು 2027 ರ ವೆಳೆಗೆ 112 ಬಿಲಿಯನ್ ಡಾಲರ್ ಗೆ ಏರಿಕೆಯಾಗಲಿದೆ ಎಂದು ಅಸೋಚಾಮ್-ಕೆಪಿಎಂಜಿ ಜಂಟಿ ಅಧ್ಯಯನ ವರದಿ ಹೇಳಿದೆ. ಆದರೆ ಪ್ರತಿ ಬಜೆಟ್ ನಲ್ಲಿ ಶೇ.10 ರಷ್ಟು ಹಣ ರಕ್ಷಣಾ ಇಲಾಖೆಯಲ್ಲಿ ಇನ್ನೂ ಬಳಕೆಯಾಗದೇ ಉಳಿಯುವ ಬಗ್ಗೆಯೂ ವರದಿ ಆತಂಕ ವ್ಯಕ್ತಪಡಿಸಿದೆ.
ಮುಂದಿನ 10 ವರ್ಷಗಳಲ್ಲಿ ಭಾರತದ ರಕ್ಷಣಾ ಖರೀದಿಗೆ ಸಂಬಂಧಿಸಿದ ಬಂಡವಾಳ ವೆಚ್ಚ 250 ಬಿಲಿಯನ್ ಡಾಲರ್ ಗೆ ಏರಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.