ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧವನ್ನು ಬೆಂಬಲಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇದೀಗ ಯೂ-ಟರ್ನ್ ಹೊಡೆದಿದ್ದು ನೋಟು ನಿಷೇಧದಿಂದ ಎಷ್ಟು ಜನರಿಗೆ ಅನುಕೂಲವಾಗಿದೆ ಎಂದು ಪ್ರಶ್ನಿಸಿದ್ದಾರೆ.
ನೋಟು ನಿಷೇಧವನ್ನು ನಾನು ಸಹ ಬೆಂಬಲಿಸಿದ್ದೆ. ಆದರೆ ಇದರಿಂದ ಎಷ್ಟು ಜನರಿಗೆ ಅನುಕೂಲವಾಯಿತು? ನೋಟು ನಿಷೇಧ ಸಮಯದಲ್ಲಿ ಕೆಲವರು ಸುಲಭವಾಗಿ ಒಂದು ಕಡೆಯಿಂದ ನಗದನ್ನು ಮತ್ತೊಂದು ಕಡೆಗೆ ಸಾಗಿಸಿದರು ಎಂದು ನಿತೀಶ್ ಹೇಳಿದ್ದಾರೆ.
ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಾ ನಿತೀಶ್ ಕುಮಾರ್ ಈ ರೀತಿ ಹೇಳಿದ್ದಾರೆ. ನೀವು ಬ್ಯಾಂಕಿನವರು ಜನಸಾಮಾನ್ಯರು ಪಡೆದ ಸಾಲದ ವಸೂಲಿಗೆ ಹೆಚ್ಚು ಆಸಕ್ತಿ ವಹಿಸುತ್ತೀರಿ. ಆದರೆ, ಇದೇ ವೇಳೆ ಸಾಲ ಪಡೆದು ಮಾಯವಾಗುವ ಪ್ರಭಾವಿಗಳ ಕಥೆಯೇನು? ನನಗೆ ಆಶ್ಚರ್ಯವೆಂದರೆ, ಪ್ರಭಾವಿಗಳ ವಂಚನೆ ಕುರಿತು ಬ್ಯಾಂಕ್ ನ ಹಿರಿಯ ಅಧಿಕಾರಿಗಳಿಗೆ ಗೊತ್ತಿರುವುದಿಲ್ಲ ಎಂದ ನಿತೀಶ್ ದೂರಿದ್ದಾರೆ.