ದೇಶ

ಡಿಡಿಸಿಎ ಮಾನಹಾನಿ ಪ್ರಕರಣ: ಅರುಣ್ ಜೇಟ್ಲಿ ಕ್ಷಮೆ ಕೇಳಿದ ಕುಮಾರ್ ವಿಶ್ವಾಸ್

Lingaraj Badiger
ನವದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರು ಸೋಮವಾರ  ಕೇಂದ್ರ ಹಣಕಾಸು ಸಚಿವ ಜೇಟ್ಲಿ ಅವರ ಕ್ಷಮೆ ಕೇಳಿದ್ದಾರೆ.
ಅರುಣ್ ಜೇಟ್ಲಿ ಅವರು ಡಿಡಿಸಿಎದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದ ಕುಮಾರ ವಿಶ್ವಾಸ್ ಅವರು, ಈ ಸಂಬಂಧ ಇಂದು ಜೇಟ್ಲಿ ಅವರಿಗೆ ಪತ್ರ ಬರೆದು ಕ್ಷಮೆ ಕೇಳಿದ್ದಾರೆ ಮತ್ತು ಕ್ಷಮೆಯನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಜೇಟ್ಲಿ ಪರ ವಕೀಲ ಮಾನಿಕ್ ದೊಗ್ರಾ ಅವರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಆಪ್ ಮುಖಂಡರಾದ ಅಶುತೋಶ್,, ದೀಪಕ್ ಬಾಜ್ ಪೇಯಿ, ರಾಘವ್ ಚಾಂದಾ, ಸಂಜಯ್ ಸಿಂಗ್ ಅವರು ಈಗಾಗಲೇ ಜೇಟ್ಲಿ ಕ್ಷಮೆ ಕೇಳಿದ್ದು, ಕುಮಾರ್ ವಿಶ್ವಾಸ್ ಮಾತ್ರ ಕ್ಷಮೆ ಕೇಳಿರಲಿಲ್ಲ.
ಡಿಡಿಸಿಎನಲ್ಲಿ ಹಣಕಾಸು ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರಾದ ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ಅಶುತೋಷ್ ಹಾಗೂ ದೀಪಕ್ ಬಾಜ್ ಪೇಯಿ ಅವರ ವಿರುದ್ಧ 10 ಕೋಟಿ ರುಪಾಯಿಗಳ ಮಾನಹಾನಿ ಪ್ರಕರಣವನ್ನು ಅರುಣ್ ಜೇಟ್ಲಿ ದಾಖಲಿಸಿದ್ದರು.
SCROLL FOR NEXT