ದೇಶ

ಇದೇ ಮೊದಲು, ಪತ್ನಿಯರನ್ನು ಪರಿತ್ಯಜಿಸಿದ್ದ 5 ಎನ್‌ಆರ್‌ಐಗಳ ಪಾಸ್‌ಪೋರ್ಟ್‌‌‌‌ ಹಿಂಪಡೆದ ಕೇಂದ್ರ!

Vishwanath S
ನವದೆಹಲಿ: ಭಾರತದಲ್ಲಿ ತಮ್ಮ ಪತ್ನಿಯರನ್ನು ಪರಿತ್ಯಜಿಸಿರುವ ಆನಿವಾಸಿ ಭಾರತೀಯರಿಗೆ ಕಾನೂನುಗಳನ್ನು ಬಿಗಿಗೊಳಿಸಲು ಮುಂದಾಗಿದ್ದ ಕೇಂದ್ರ ಸರ್ಕಾರ ಇದೀಗ ಮೊದಲ ಬಾರಿಗೆ ಐವರು ಎನ್‌ಆರ್‌ಐಗಳ ಪಾಸ್ ಪೋರ್ಟ್ ಅನ್ನು ಹಿಂಪಡೆದಿದೆ. 
ಎನ್‌ಆರ್‌ಐಗಳ ವೈವಾಹಿಕ ವಿವಾದ ಪ್ರಕರಣಗಳ ಇತ್ಯರ್ಥ ಸಂಬಂಧ ಕೇಂದರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರಸ್ತಾಪವನ್ನು ಒಪ್ಪಿಕೊಂಡಿರುವ ವಿದೇಶಾಂಗ ಸಚಿವಾಲಯವು ಮೊದಲ ಬಾರಿಗೆ ಈ ಕ್ರಮವನ್ನು ಕೈಗೊಂಡಿದೆ. 
ಭಾರತದಲ್ಲಿ ಪತ್ನಿಯರನ್ನು ಪರಿತ್ಯಜಿಸಿದ ಎನ್‌ಆರ್‌ಐಗಳಿಗೆ ಇದಕ್ಕೂ ಮುನ್ನ ಪತ್ರಿಕೆಗಳಲ್ಲಿ ನೋಟಿಸ್ ಕಳುಹಿಸಲಾಗುತ್ತಿತ್ತು. ಆದರೆ ಇದೀಗ ವಿದೇಶಾಂಗ ಸಚಿವಾಲಯದ ವೆಬ್ ಸೈಟ್ ಮೂಲಕ ನೇರವಾಗಿ ಎನ್‌ಆರ್‌ಐಗೆ ಸಮನ್ಸ್ ಕಳುಹಿಸಲು ಎಂಇಎ ಒಪ್ಪಿಕೊಂಡಿದೆ. 
ಭಾರತೀಯ ವಧುಗಳನ್ನು ಮದುವೆಯಾಗಿ ಕೆಲ ದಿನಗಳಲ್ಲೇ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪತ್ನಿಯನ್ನು ಪರಿತ್ಯಜಿಸುತ್ತಿದ್ದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಇವುಗಳಿಗೆ ಬ್ರೇಕ್ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಈ ದಿಟ್ಟ ಕ್ರಮಕೈಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
SCROLL FOR NEXT