ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಭಾರತದ ಆರ್ಥಿಕತೆ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.7.7 ಬೆಳವಣಿಗೆ

ಈ ವರ್ಷದ ಜನವರಿಯಿಂದ ಮಾರ್ಚ್ ವರೆಗಿನ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ದರ ಶೇ. 7. 7 ರಷ್ಟು ವೃದ್ದಿಯಾಗಿದ್ದು, ವೇಗದ ಆರ್ಥಿಕತೆಯಿಂದಾಗಿ ಭಾರತ ಮತ್ತೆ ತನ್ನ ಸ್ಥಾನಕ್ಕೆ ಹಿಂತಿರುಗಿದೆ.

ಸಾಂದರ್ಭಿಕ ಚಿತ್ರ
Nagaraja AB
Updated On : 31 May 2018, 7:58 am
ನವದೆಹಲಿ:  ಈ ವರ್ಷದ ಜನವರಿಯಿಂದ  ಮಾರ್ಚ್ ವರೆಗಿನ ನಾಲ್ಕನೇ ತ್ರೈಮಾಸಿಕದಲ್ಲಿ  ದೇಶದ  ಆರ್ಥಿಕ  ದರ ಶೇ. 7. 7 ರಷ್ಟು ವೃದ್ದಿಯಾಗಿದ್ದು,  ವೇಗದ ಆರ್ಥಿಕತೆಯಿಂದಾಗಿ ಭಾರತ ಮತ್ತೆ ತನ್ನ ಸ್ಥಾನಕ್ಕೆ ಹಿಂತಿರುಗಿದೆ.
ಭಾರತದ ಆರ್ಥಿಕತೆ ವೃದ್ದಿ ದರ ಚೀನಾವನ್ನು ಮೀರಿಸಿದೆ.ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕ ವೃದ್ದಿ ದರ ಶೇ. 6.8 ರಷ್ಟಾಗಿದೆ.
ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಗೆ ಬೆಳವಣಿಗೆಯಾಗಿದೆ ಎಂದು ಅಂಕಿ ಅಂಶ ಸಚಿವಾಲಯ ಮಾಹಿತಿ ನೀಡಿದೆ.  ವಾರ್ಷಿಕ ಬೆಳವಣಿಗೆ ಶೇ.7. 3 ರಷ್ಟಾಗುವ ಮುನ್ಸೂಚನೆಯನ್ನು  ರಾಯಿಟರ್ಸ್ ಸಮೀಕ್ಷೆಗಳು ನೀಡಿವೆ.

Advertisement

Advertisement

ಇದಕ್ಕೂ ಮೊದಲು ವರದಿ  ಮಾಡಿದ್ದ  ಶೇ.  7.2  ರಿಂದ ಶೇ. 7.0 ರಷ್ಟು  ತಾತ್ಕಾಲಿಕ  ಆರ್ಥಿಕ ಬೆಳವಣಿಗೆ ದರದ ಅಕ್ಟೋಬರ್-ಡಿಸೆಂಬರ್ ವಾರ್ಷಿಕ ವೇಗವನ್ನು ಸಚಿವಾಲಯ ಪರಿಷ್ಕರಿಸಿದೆ.ಮಾರ್ಚ್ 31 ಕ್ಕೆ ಕೊನೆಗೊಂಡ ಹಣಕಾಸಿನ ವರ್ಷದಲ್ಲಿ, ಸಚಿವಾಲಯವು ಶೇ 6.7 ರಷ್ಟು ಬೆಳವಣಿಗೆ ದಾಖಲಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments