ತೇಜ್ ಪ್ರತಾಪ್, ಐಶ್ವರ್ಯ ರೈ 
ದೇಶ

ಮದುವೆಯಾದ ಆರು ತಿಂಗಳಲ್ಲೇ ವಿಚ್ಚೇದನ ಅರ್ಜಿ ಸಲ್ಲಿಸಿದ ಲಾಲೂ ಪುತ್ರ ತೇಜ್ ಪ್ರತಾಪ್

ಮದುವೆಯಾದ ಆರು ತಿಂಗಳಲ್ಲೇ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ , ತನ್ನ ಪತ್ನಿಯಿಂದ ವಿಚ್ಚೇದನ ಕೋರಿ ಪಾಟ್ನಾದ ಸಿವಿಲ್ ನ್ಯಾಯಾಲದಲ್ಲಿ ವಿಚ್ಚೇದನ ಅರ್ಜಿ ದಾಖಲಿಸಿದ್ದಾರೆ.

ಪಾಟ್ನಾ : ಮದುವೆಯಾದ ಆರು ತಿಂಗಳಲ್ಲೇ  ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್  ಹಿರಿಯ ಮಗ ತೇಜ್ ಪ್ರತಾಪ್ ಯಾದವ್  , ತನ್ನ ಪತ್ನಿಯಿಂದ ವಿಚ್ಚೇದನ ಕೋರಿ ಪಾಟ್ನಾದ ಸಿವಿಲ್ ನ್ಯಾಯಾಲದಲ್ಲಿ  ವಿಚ್ಚೇದನ ಅರ್ಜಿ ದಾಖಲಿಸಿದ್ದಾರೆ.

ಕೆಲ ದಿನಗಳ ಹಿಂದೆಯೇ ತೇಜ್ ಪ್ರತಾಪ್  ವಿಚ್ಚೇದನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಇಂದು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಆದಾಗ್ಯೂ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ತೇಜ್ ಪ್ರತಾಪ್ ಯಾದವ್ ಕುಟುಂಬ ಸದಸ್ಯರು ನಿರಾಕರಿಸಿದ್ದಾರೆ.

ಬಹುಕೋಟಿ ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ರಾಂಚಿಯ  ಜೈಲಿನಲ್ಲಿದ್ದಾರೆ.  ತೇಜ್ ಪ್ರತಾಪ್ ಪತ್ನಿ ಐಶ್ವರ್ಯ ತಂದೆ ಕೂಡಾ ಹಾಲಿ ಆರ್ ಜೆಡಿ ಶಾಸಕರಾಗಿದ್ದಾರೆ. ಮೇ ತಿಂಗಳಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ತೇಜ್ ಪ್ರತಾಪ್  ವೈಶಾಲಿ ಜಿಲ್ಲೆಯ ಮಾನ್ಹಾ ಕ್ಷೇತ್ರದ ಶಾಸಕರಾಗಿದ್ದು, ಮಹಾಮೈತ್ರಿ ಸರ್ಕಾರದಲ್ಲಿ ತೇಜ್ ಪ್ರತಾಪ್  ಆರೋಗ್ಯ ಸಚಿವರಾಗಿದ್ದರು. ಲಾಲೂ ಪ್ರಸಾದ್ ಯಾದವ್  ಅನುಪಸ್ಥಿತಿಯಲ್ಲಿ  ಪಕ್ಷ ಮುನ್ನಡೆಸುತ್ತಿರುವ ತೇಜಸ್ವಿ ಯಾದವ್ ಜೊತೆಗೆ  ತೇಜ್ ಪ್ರತಾಪ್ ಉತ್ತಮ  ಸಂಬಂಧ ಹೊಂದಿಲ್ಲ ಎಂಬುದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!