ದೇಶ

ಎಂ.ಜೆ. ಅಕ್ಬರ್ ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು: ಪತ್ರಕರ್ತೆ MeToo ಆರೋಪ

Shilpa D

ನವದೆಹಲಿ: ಪತ್ರಕರ್ತರಾಗಿದ್ದು ಸದ್ಯ ರಾಜಕಾರಣಿಯಾಗಿರುವ ಸಂಪಾದಕ ಎಂ ಜೆ ಅಕ್ಬರ್ ನನ್ನನ್ನು ರೇಪ್ ಮಾಡಿದ್ದರು ಎಂದು ಭಾರತೀಯ ಮೂಲಕ ಅಮೆರಿಕಾ ಪತ್ರಕರ್ತೆ ಆರೋಪಿಸಿದ್ದಾರೆ.

ಭಾರತೀಯ ಮೂಲದ ಅಮೆರಿಕನ್‌ ಪತ್ರಕರ್ತೆ ಪಲ್ಲವಿ ಗಗೋಯ್ ವಾಷಿಂಗ್ಟನ್‌ ಪೋಸ್ಟ್‌ ನಲ್ಲಿ ಬರೆದಿರುವ ಬ್ಲಾಗ್‌ನಲ್ಲಿ ಆರೋಪಿಸಿದ್ದಾರೆ, ದಿ ಏಶ್ಯನ್‌ ಏಜ್‌ ಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದಾಗ ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ದೂರಿದ್ದಾರೆ. ಆದರೆ ವಾಷಿಂಗ್ಟನ್ ಪೋಸ್ಟ್ ಮಾಡಿರುವ ಆರೋಪ ಸುಳ್ಳು ಎಂದು ಅಕ್ಬರ್  ಅವರ ವಕೀಲ ಹೇಳಿದ್ದಾರೆಂದು ವರದಿಯಾಗಿದೆ.

ಅಕ್ಬರ್  ವಿರುದ್ಧ ಈಚೆಗೆ ಬೇರೊಬ್ಬ ಮಹಿಳೆ ಮೀ ಟೂ ಅಭಿಯಾನದಡಿ  ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು; ಅದನ್ನು ಕೇಳಿ ನನ್ನ ಮನಸ್ಸು ಹಿಂದಕ್ಕೋಡಿತು. ನಾನು ಏಶ್ಯನ್‌ ಏಜ್‌ ಪತ್ರಿಕೆಯಲ್ಲಿ ದುಡಿಯುತ್ತಿದ್ದಾಗ ನಾನು 22 ವರ್ಷ ವಯಸ್ಸಿನವಳಾಗಿದ್ದೆ. ಆಗ ಅಲ್ಲಿ ಹೆಚ್ಚಿನ ನೌಕರರೆಲ್ಲ ಮಹಿಳೆಯರೇ ಆಗಿದ್ದರು''
ಅಕ್ಬರ್ ಅವರ ಕೈಕೆಳಗೆ ನವದೆಹಲಿಯಲ್ಲಿ ಕೆಲಸ ಮಾಡುವುದು ಪ್ರತಿಷ್ಠೆಯ ಅವಕಾಶವಾಗಿತ್ತು.

ಆಗ ಅವರು 40 ವರ್ಷದರಾಗಿದ್ದರು, ನಮ್ಮ ತಪ್ಪುಗಳನ್ನು ತಿದ್ದುತ್ತಾ ನಮ್ಮನ್ನು ಏರಿದ ಧ್ವನಿಯಲ್ಲಿ ಗದರಿಸುತ್ತಿದ್ದರು, ಬೈಯುತ್ತಿದ್ದರು; ನಾವು ಅವರ ನಿರೀಕ್ಷೆಯ ಮಟ್ಟದಲ್ಲಿ ಇಲ್ಲವೆಂದು ಹೀಯಾಳಿಸುತ್ತಿದ್ದರು. ನನ್ನನ್ನು ಬೇಕ ಸಂಪಾದಕಿಯಾಗಿ ಮಾಡಿದರು ಅದಕ್ಕಾಗಿ ನಾನು ಭಾರೀ ಬೆಲೆ ತೆರಬೇಕಾಯಿತು.

1994ರಲ್ಲಿ ನಾನು ಒಪ್‌-ಎಡ್‌ ಪುಟದ ಸಂಪಾದಕಿಯಾಗಿದ್ದಾಗ ಒಮ್ಮೆ ನಾನು ಸಿದ್ಧಪಡಿಸಿದ್ದ ಪುಟವನ್ನು ಅವರಿಗೆ ತೋರಿಸಲು ಅವರ ಕೋಣೆಗೆ ಹೋಗಿದ್ದೆ. ನನ್ನ ಕೆಲಸವನ್ನು ಮೆಚ್ಚಿಕೊಂಡ ಅವರು ಇದ್ದಕ್ಕಿದ್ದಂತೆಯೇ ನನ್ನ ಅಪ್ಪಿಕೊಂಡು ನನಗೆ ಬಲವಂತದ ಕಿಸ್ ಮಾಡಿದರು. ಈ ಕ್ಷಣಾರ್ಧದ ಲೈಂಗಿಕ ದಾಳಿಯಿಂದ ತತ್ತರಿಸಿದ ನಾನು ಗೊಂದಲದ ಗೂಡಾಗಿ ಕೋಣೆಯಿಂದ ಹೊರಬಂದೆ.

ಅದಾಗಿ ಕೆಲವು ತಿಂಗಳ ಬಳಿಕ ನಿಯತಕಾಲಿಕವೊಂದರ ಉದ್ಘಾಟನೆ ಇತ್ತು, ಅದಕ್ಕಾಗಿ ಫ್ಯಾನ್ಸಿ ತಾಜ್‌ ಹೊಟೇಲ್‌ನಲ್ಲಿ  ರೂಂ ಗೆ ಕರೆದರು, ಪೇಜ್ ಲೇಔಟ್ ನೋಡಬೇಕು ಎಂದು ಹೇಳಿದರು, ಅಲ್ಲಿ ನಾನು ಅವರ ಕೊಠಡಿಗೆ ಹೋದಾಗ  ಮತ್ತೆ ಇದೇ ರೀತಿ ನನ್ನ ಜೊತೆ ವರ್ತಿಸಿದರು.ಬಲವಂತವಾಗಿ ನನಗೆ ಕಿಸ್ ಮಾಡಲು ಬಂದಾಗ ನಾನು ಅವರನ್ನು ತಳ್ಳಿ ಹೊರಬಂದೆ, ನನ್ನ ಮುಖವನ್ನು ಪರಚಿದರು, ನಾನು ವಸ್ತುತಃ ಹೋರಾಡಿ  ಅಳುತ್ತಾ ಹೊರ ಬಂದೆ.

ಅದಾದ ನಂತರ ಜೈಪುರದಲ್ಲಿ  ಮತ್ತೊಮ್ಮೆ ಕರೆ ಬಂದಿತ್ತು. ಅಲ್ಲಿ ಹೋದಾಗ ಮತ್ತೆ ಅವರು ಅದೇ ಕೆಲಸ ಮುಂದುವರಿಸಿದರು, ನಾನು  ಹೋರಾಡಿದೆ, ಆದರೆ ಅವರು ನನಗಿಂತ ದೈಹಿಕವಾಗಿ ಬಲಶಾಲಿಯಾಗಿದ್ದರು.... ಎಂದು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

SCROLL FOR NEXT