ದೇಶ

ಸೊಹ್ರಾಬುದ್ದೀನ್ ಎನ್ ಕೌಂಟರ್: ಅಮಿತ್ ಶಾ ಖುಲಾಸೆ ಪ್ರಶ್ನಿಸಿದ್ದ ಅರ್ಜಿ ವಜಾ

Raghavendra Adiga
ಮುಂಬೈ: 2005ರ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷ ಮುಖ್ಯಸ್ಥ ಅಮಿತ್ ಶಾ ಖುಲಾಸೆ ತೀರ್ಪನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಂಬೈ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ. ಇದರಿಂದಾಗಿ ಶಾ ಇನ್ನೊಂದು ಮಹತ್ವದ ಕಾನೂನು ಸಮರದಿಂದ ಪಾರಾಗಿ ನಿರಾಳರಾಗುವಂತಾಗಿದೆ.
ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಖುಲಾಸೆಗೊಳಿಸಿದ್ದ ಸಿಬಿಐ ನ ಕ್ರಮ ಪ್ರಶ್ನಿಸಿ ಮುಂಬೈ ವಕೀಲರ ಸಂಘ ಇದೇ ಜನವರಿಯಲ್ಲಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ರಂಜಿತ್ ಮೋರ್ ಮತ್ತು ಭಾರತಿ ದಂಗ್ರೆ ಅವರನ್ನೊಳಗೊಂಡ ನ್ಯಾಯಪೀಠ ವ್ವಿಚಾರಣೆ ನಡೆಸಿ ಈ ಅರ್ಜಿಯಲ್ಲಿರುವ ಅಂಶಗಳ ಅರಿಗಣನೆ ಸಾಧ್ಯವಿಲ್ಲ. ಇದಕ್ಕೆ ನಾವು ಯಾವ ಪ್ರಿಹಾರ ನೀಡಲು ಬರುವುಇಲ್ಲ ಎನ್ನುವ ಮೂಲಕ ಮನವಿಯನ್ನು ತಿರಸ್ಕರಿಸಿದೆ.
ಗುಜರಾತ್ ಪೋಲೀಸರು ನವೆಂಬರ್ 2005 ರಲ್ಲಿ ನಡೆಸಿದ್ದ ಎನ್ ಕೌಂಟರ್ ನಲ್ಲಿ ಶಂಕಿತ ಉಗ್ರ ಸೋಹ್ರಾಬುದ್ದೀನ್ ಶೇಖ್ ಮತ್ತು ಅವರ ಪತ್ನಿ ಕೌಸರ್ ಬೀ ಹತ್ಯೆಯಾಗಿದ್ದರು. ಆದರೆ ಇದೊಂದು ನಕಲಿ ಎನ್ ಕೌಂಟರ್ ಆಗಿದೆ ಎನ್ನುವ ಆರೋಪ ಕೇಳಿ ಬಂದದ್ದಲದೆ ಅಮಿತ್ ಶಾ ಅವರ ಹೆಸರು ಸಹ ಇದಕ್ಕೆ ತಳುಕು ಹಾಕಿಕೊಂಡಿತ್ತು.
SCROLL FOR NEXT