ದೇಶ

ಏನೇ ಆಗಲಿ ಡಿ.6ರಂದು ರಾಮ ಮಂದಿರಕ್ಕೆ ಶಂಕುಸ್ಥಾಪನೆ ಮಾಡಲಿದ್ದೇವೆ: ಸಾಧ್ವಿ ಪ್ರಾಚಿ

Vishwanath S
ನವದೆಹಲಿ: ಸುಪ್ರೀಂ ಕೋರ್ಟ್ ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು 2019ರ ಜನವರಿಗೆ ಮುಂದೂಡಿದ್ದರಿಂದ ಬೇಸರಗೊಂಡಿರುವ ವಿಶ್ವ ಹಿಂದೂ ಪರಿಷತ್ ನ ಸಾಧ್ವಿ ಪ್ರಾಚಿ ಏನೇ ಆಗಲಿ ಡಿಸೆಂಬರ್ 6ರಂದು ರಾಮಮಂದಿರಕ್ಕೆ ಶಂಕುಸ್ಥಾಪನೆ ಮಾಡಲಿದ್ದೇವೆ ಎಂದರು. 
ಸಾಧ್ವಿ ಪ್ರಾಚಿ ಅವರು ರಾಮಮಂದಿರ ನಿರ್ಮಾಣಕ್ಕೆ ಯಾರ ನೆರವೂ ಬೇಡ ಎಂದು ತಿಳಿಸಿದ್ದಾರೆ. ಶ್ರೀರಾಮಚಂದ್ರರ ಮಂದಿರವನ್ನು ಧಾಂ ಧೂಂ ಎಂದು ನಿರ್ಮಾಣ ಮಾಡಲಾಗುವುದು ಎಂದರು. 
ಮುಂದಿನ ತಿಂಗಳ 6ರಂದು ನಾವು ಶಿಲಾನ್ಯಾಸ ಮಾಡಲಿದ್ದೇವೆ. ಹಿಂದೂಸ್ಥಾನದಲ್ಲಿರುವ ಹಿಂದೂಗಳನ್ನು ಅಯೋಧ್ಯೆಗೆ ಬರಹೇಳಿ. ರಾಮಮಂದಿರ ಘೋಷಣೆ ಮಾಡಿ ಎಂದು ಪ್ರಾಚಿ ಹೇಳಿದ್ದಾರೆ. 
ಅಗತ್ಯ ಬಿದ್ದಲ್ಲಿ 1992ರ ಶೈಲಿಯಲ್ಲಿ ಇನ್ನೊಂದು ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಆರ್ಎಸ್ಎಸ್ ನ ಮಹಾ ಕಾರ್ಯದರ್ಶಿ ಭಯ್ಯಾಜಿ ಜೋಶಿ ಹೇಳಿದ ಬೆನ್ನಲ್ಲೇ ಪ್ರಾಚಿ ಈ ಹೇಳಿಕೆ ನೀಡಿದ್ದಾರೆ.
SCROLL FOR NEXT