ಹೈದರಾಬಾದ್: ಪ್ರಧಾನಿ ಮೋದಿ ಅನಾಕೋಂಡ ಹಾವಿದ್ದಂತೆ.. ತಮಗೆ ಸಿಕ್ಕ ಎಲ್ಲವನ್ನೂ ನುಂಗಿ ಹಾಕುತ್ತಿದ್ದು, ಇದೀಗ ಅವರ ಹಸಿವಿಗೆ ಸಿಬಿಐ ಮತ್ತು ಆರ್ ಬಿಐ ಸಂಸ್ಥೆಗಳು ಆಹಾರವಾಗಿದೆ ಎಂದು ಆಂಧ್ರ ಪ್ರದೇಶ ಸಚಿವರೊಬ್ಬರು ಹೇಳಿದ್ದಾರೆ.
ಆಂಧ್ರ ಪ್ರದೇಶ ವಿತ್ತ ಸಚಿವ ಯನಮಾಲ ರಾಮಕೃಷ್ಣುಡು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಅನಾಕೊಂಡ ಹಾವಿಗಿಂತ ದೊಡ್ಡದಾದದ್ದು ಏನಾದರೂ ಇದ್ದರೆ ಅದು ಪ್ರಧಾನಿ ಮೋದಿ ಮಾತ್ರ. ಪ್ರಧಾನಿ ಮೋದಿ ತಮ್ಮ ಹಸಿವಿಗೆ ದೇಶದ ಎಲ್ಲ ಪ್ರಮುಖ ಸಂಸ್ಥೆಗಳೂ ಆಹಾರವಾಗಿದ್ದು, ಇದೀಗ ಸಿಬಿಐ ಮತ್ತು ಆರ್ ಬಿಐ ಅನ್ನೂ ಕೂಡ ನುಂಗಿ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷ ಕನ್ನ ಲಕ್ಷ್ಮಿನಾರಾಯಣ ಅವರು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಭ್ರಷ್ಟಾಚಾರದ ರಾಜನಾಗಿದ್ದು, ಅವರ ಭ್ರಷ್ಟಾಚಾರದ ಹಗರಣಗಳು ಶೀಘ್ರ ಬಯಲಾಗಲಿದೆ ಎಂದು ಹೇಳಿದ್ದಾರೆ.